Saturday, 13 February 2021

ಮಕ್ಕಳ ಮಂದಾರ 50 ನೇ ಸಂಚಿಕೆ

12 ವರ್ಷಗಳಿಂದ  ನಿರಂತರವಾಗಿ ಮಕ್ಕಳಿಂದ ಮಕ್ಕಳಿಗಾಗಿ ಸಂಪಾದಿಸಲ್ಪಡುವ ರಾಜ್ಯದ ಏಕೈಕ ಶಾಲಾ ಮಕ್ಕಳ  ಪತ್ರಿಕೆ "ಮಕ್ಕಳ ಮಂದಾರ" 50 ನೆ ಸಂಚಿಕೆ  ಪೂರೈಸಿದ್ದೆ. ಓದೀ.ಪಿ ಡಿ ಎಫ್ ಆವೃತ್ತಿಯಲ್ಲಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://drive.google.com/file/d/1ZmHp-J6Qxtow8eoV2s0AbZqefczdFRFA/view?usp=drivesdk
ಆನ್ಲೈನ್  ಬ್ಲಾಗ್ ಆವೃತ್ತಿಯಲ್ಲಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
http://makkalamandara.blogspot.com/2021/02/50.html

Wednesday, 28 October 2020

ಇತಿಹಾಸ ಅರಿಯಿರಿ

ನಮ್ಮ ದೇಶದ ಸಂಪೂರ್ಣ ಮಾಹಿತಿ  ಹೆಮ್ಮೆಯಿಂದ ಶೇರ್ ಮಾಡಿ ಫ್ರೆಂಡ್ಸ್      
  ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
 ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
 ಕ್ರಿ.ಪೂ.1000 ಕಬ್ಬಿಣದ ಬಳಕೆ.
 ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
: ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
 ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
 ಕ್ರಿ.ಶ.300-888 ಕಂಚಿಯ ಪಲ್ಲವರು.
 ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
 ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
 ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
 ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
 ಕ್ರಿ.ಶ.907-1256 ಚೋಳ ಸಾಮ್ರಾಜ್ಯ. 
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
 ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
 ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
 ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
 ಕ್ರಿ.ಶ.1290-1320  ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
 ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
 ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
 ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
 ಕ್ರಿ.ಶ.1627-1680 ಶಿವಾಜಿಯ ಕಾಲ.
 ಕ್ರಿ.ಶ.1757 ಪ್ಲಾಸಿ ಕದನ.
 ಕ್ರಿ.ಶ.1764 ಬಕ್ಸಾರ ಕದನ.
 ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
 ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
 ಕ್ರಿ.ಶ.1824-ಕಿತ್ತೂರು ದಂಗೆ.
 ಕ್ರಿ.ಶ.1857 ಸಿಪಾಯಿ ದಂಗೆ.
 ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
 ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾ‌ಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...
⭐1973-ಕರ್ನಾಟಕ ಮರುನಾಮಕರಣ.

#ಪ್ರಮುಖ_ಹುದ್ದೆಗಳ_ಅವದಿ 🍡

⚫ ರಾಷ್ಟ್ರಪತಿ=5ವರ್ಷ
⚫ ಉಪರಾಷ್ಟ್ರಪತಿ=5ವರ್ಷ
⚫ ರಾಜ್ಯ ಸಭಾ ಸದಸ್ಯ=6ವರ್ಷ
⚫ ಲೋಕ ಸಭಾ ಸದಸ್ಯ=5ವರ್ಷ
⚫ ರಾಜ್ಯಪಾಲರು= 5ವರ್ಷ
⚫ ವಿಧಾನ ಸಭಾ ಸದಸ್ಯ=5ವರ್ಷ
⚫ ವಿಧಾನ ಪರಿಷತ್ ಸದಸ್ಯ=6ವರ್ಷ
📌📌📌📌📌📌📌
🍡 ಚುನಾವಣೆ ಸ್ಪರ್ಧಿಸುವ ವಯಸ್ಸು 🍡
⚫ ರಾಷ್ಟ್ರಪತಿ=35ವರ್ಷ
⚫ ಉಪರಾಷ್ಟ್ರಪತಿ=35ವರ್ಷ
⚫ ರಾಜ್ಯ ಸಭಾ ಸದಸ್ಯ=30ವರ್ಷ
⚫ ಲೋಕ ಸಭಾ ಸದಸ್ಯ=25ವರ್ಷ
⚫ ರಾಜ್ಯಪಾಲರು= 35ವರ್ಷ
⚫ ವಿಧಾನ ಸಭಾ ಸದಸ್ಯ=25ವರ್ಷ
⚫ ವಿಧಾನ ಪರಿಷತ್ ಸದಸ್ಯ=30ವರ್ಷ
⚫ ಗ್ರಮ ಪಂಜಾಯತ್ ಸದಸ್ಯ=21ವರ್ಷ
⚫ ಮತದಾನ ವಯಸ್ಸು=18ವರ್ಷ
📌📌📌📌📌📌📌
🍡 ಭಾರತದ ನೌಕಾಪಡೆ ಕಛೇರಿ🍡
⚫ ಪಶ್ಚಿಮ ನೌಕಾಪಡೆ=ಮುಂಬಯಿ
⚫ ಪೂರ್ವ ನೌಕಾಪಡೆ=ವಿಶಾಖಪಟ್ಟಣಂ
⚫ ದಕ್ಷಿಣ ನೌಕಾಪಡೆ=ಕೊಚ್ಚಿ
⚫ ಆಗ್ನೇಯ ನೌಕಾಪಡೆ=ಅಂಡಮಾನ್ ನಿಕೋಬಾರ್
📌📌📌📌📌📌📌
🍡ಪ್ರಾಣಿಗಳ ಉಸಿರಾಟದ ಅಂಗಗಳು🍡
⚫ಮೀನು=ಕಿವಿರು
⚫ಕಪ್ಪೆ=ತೇವಭರಿತ ಚರ್ಮ ಹಾಗೂ ಶ್ವಾಸಕೋಶ
⚫ಸಸ್ತನಿ= ಶ್ವಾಸಕೋಶ
⚫ಎರೆಹುಳು ಜಿಗಣಿ= ಚರ್ಮ
⚫ಕೀಟಗಳು=ಟಕ್ರಯಾ(ಶ್ವಾಸನಾಳ)
📌📌📌📌📌📌📌
🍡ಪ್ರಪಂಚದ ಪ್ರಮುಖ ಸಸ್ಯವರ್ಗಗಳು🍡
⚫ಅಮೆರಿಕಾ=ಪ್ರೈರಿ ಹುಲ್ಲುಗಾವಲು
⚫ದಕ್ಷಿಣ ಅಮೆರಿಕಾ=ಪಂಪಸ್ ಹುಲ್ಲುಗಾವಲು
⚫ಆಫ್ರಿಕಾ=ಸವನ್ನಾ ಹುಲ್ಲುಗಾವಲು
⚫ದಕ್ಷಿಣ ಆಫ್ರಿಕಾ=ವೈಲ್ಡಿ ಹುಲ್ಲುಗಾವಲು
⚫ಆಸ್ಟ್ರೇಲಿಯಾ=ಡೌನ್ಸ್ ಹುಲ್ಲುಗಾವಲು
⚫ಏಷ್ಯಾ=ಸ್ಟೆಪಿಸ್ ಹುಲ್ಲುಗಾವಲು
⚫ಯುರೋಪ್=ಸ್ಟೆಪಿಸ್ ಹುಲ್ಲುಗಾವಲು
⚫ಗಯಾನಾ=ಲಾನಸ್ ಹುಲ್ಲುಗಾವಲು
⚫ಹಂಗೇರಿ=ಪುಷ್ಟಿಸ್ ಹುಲ್ಲುಗಾವಲು
🍡ಕಣಿವೆ ಮಾರ್ಗ🍡
⚫ಶಿವಮೊಗ್ಗದಿಂದ ಉಡುಪಿ=ಆಗುಂಬೆ ಘಾಟ
⚫ಚಿಕ್ಕಮಂಗಳೂರುದಿಂದ ಮಂಗಳೂರು=ಚಾರ್ಮಡಿ ಘಾಟ
⚫ಶಿರೂರುದಿಂದ ಬೈಂದೂರು=ಕೊಲ್ಲೂರು ಘಾಟ
* ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು
1.ವಿಶಾಖಪಟ್ಟಣ     --  ಭಾಗ್ಯನಗರ,(city of destiny)
2.ವಿಜಯವಾಡ      --  ಗೆಲುವಿನ ಸ್ಥಾನ (place of victory)  
3.ಗುಂಟುರು         --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ 
 

 ಉತ್ತರಪ್ರದೇಶ
1.ಆಗ್ರಾ           --  ತಾಜನಗರಿ
2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3.ಲಕ್ನೋ          --  ನವಾಬರ ನಗರ (city of nawab's)
4.ಪ್ರಯಾಗ        --  ದೇವರ ಮನೆ
5.ವಾರಾಣಾಸಿ     --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವ ಜೀವಂತ ಹಳೆಯ ನಗರ, ಪವಿತ್ರ ನಗರ.

ಗುಜರಾತ
1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 
2.ಸೂರತ್           --   ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.
ಕರ್ನಾಟಕ
1.ಬೆಂಗಳೂರು    --  ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2.ಕೂರ್ಗ್ಸ           --   ಭಾರತದ ಸ್ಕಾಟ್ಲೆಂಡ್.
3.ಮೈಸೂರ         --   ಸಾಂಸ್ಕ್ರತಿಕ ನಗರಿ.
ಓಡಿಸ್ಸಾ
1.ಭುವನೇಶ್ವರ    --  ಭಾರತದ ದೇವಾಲಯ ನಗರ
ತಮಿಳುನಾಡು
1.ಕೊಯಮತ್ತೂರು   --    ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
2.ಮಧುರೈ           --    ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
3.ಸಲೇಂ             --    ಮಾವಿನ ಹಣ್ಣಿನ ನಗರ. 
4.ಚೆನ್ನೈ              --    ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india
ಪಶ್ಚಿಮ ಬಂಗಾಳ
1.ಡಾರ್ಜಿಲಿಂಗ್    --   ಬೆಟ್ಟಗಳ ರಾಣಿ,
2.ದುರ್ಗಾಪೂರ    --   ಭಾರತದ ರೋರ್
3.ಮಾಲ್ಡಾ         --   ಮಾವಿನ ಹಣ್ಣಿನ ನಗರ. 
4.ಕಲ್ಕತ್ತ          --    ಅರಮನೆಗಳ ನಗರ. 
ಜಾರ್ಖಂಡ್ 
1.ಧನಬಾದ್         --   ಭಾರತದ ಕಲ್ಲಿದ್ದಲು ರಾಜಧಾನಿ.
2.ಜಮಶೇಡಪುರ     --   ಭಾರತದ ಸ್ಟೀಲ್ ನಗರ
ತೆಲಂಗಾಣ
1.ಹೈದ್ರಾಬಾದ್      --  ಮುತ್ತುಗಳ ನಗರ, ಹೈಟೆಕ್ ಸಿಟಿ.
ರಾಜಸ್ತಾನ    
1.ಜೈಪುರ           --  ಗುಲಾಬಿ ನಗರ, ಭಾರತದ ಪ್ಯಾರಿಸ್
2.ಜೈಸಲ್ಮೇರ್       --  ಭಾರತದ ಸ್ವರ್ಣ ನಗರ
3.ಉದಯಪುರ      --  ಬಿಳಿನಗರ
4.ಜೋಧಪುರ       --  ನೀಲಿನಗರ, ಸೂರ್ಯನಗರ.
ಜಮ್ಮು ಕಾಶ್ಮೀರ
1.ಕಾಶ್ಮೀರ         --     ಭಾರತದ ಸ್ವಿಜರ್ಲೇಂಡ್
2.ಶ್ರೀನಗರ        --     ಸರೋವರಗಳ ನಗರ
ಕೇರಳ
1.ಕೊಚ್ಚಿ           --     ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು 
2.ಕೊಲ್ಲಂ          --     ಅರಬ್ಬೀ ಸಮುದ್ರದ ರಾಜ.
ಮಹಾರಾಷ್ಟ್ರ
1.ಕೊಲ್ಲಾಪುರ      --     ಕುಸ್ತಿಪಟುಗಳ ನಗರ
2.ಮುಂಬೈ         --     ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್.
3.ನಾಗ್ಪುರ್         --    ಕಿತ್ತಳೆ ನಗರ
4.ಪುಣೆ             --     ದಕ್ಷಿಣದ ರಾಣಿ(deccan queen)
5.ನಾಸಿಕ್         --      ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ.
ಉತ್ತರಖಂಡ
1.ಋಷಿಕೇಶ       --    ಋಷಿಗಳ ನಗರ, ಯೋಗ ನಗರ.
ದೆಹಲಿ
1.ದೆಹಲಿ          --     ಚಳುವಳಿಗಳ ನಗರ.
ಪಯಣ
1.ಪಟಿಯಾಲಾ    --    royal city of india, 
2.ಅಮೃತಸರ್    --    ಸ್ವರ್ಣಮಂದಿರದ ನಗರ.
ಹರಿಯಾಣ
1.ಪಾಣಿಪತ್ತ      --    ನೇಕಾರರ ನಗರ, ಕೈಮಗ್ಗದ ನಗರ.

: ★★★ ಕರ್ನಾಟಕ ನಮ್ಮ ರಾಜ್ಯ★★★ 

 1.ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
 2.ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
 3.ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
 4.ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
5.ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
 6.ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
7.ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
8.ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
9.1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.

10.ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
11.ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
12.1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
13.ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

★★★ ಕರ್ನಾಟಕದ ಪ್ರಥಮಗಳು ★★★

1.ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
2.ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
3.ಕನ್ನಡ ಭಾಷೆಯ ಮೊದಲ ಪದ : ಇಸಿಲ.
4.ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
5.ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
6.ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
7.ಕನ್ನಡದ ಮೊದಲ ವಂಶ : ಕದಂಬ
8.ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
9.ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.

10.ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

★★★ ಕರ್ನಾಟಕದ ಭೌಗೋಳಿಕ ಸ್ಥಾನ★★★

1.ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
2.ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
3.ಅಕ್ಷಾಂಶ – 11 – 31′ ರಿಂದ 18 – 45′ ಉತ್ತರ ಅಕ್ಷಾಂಶದಲ್ಲಿದೆ.
4.ರೇಖಾಂಶ – 74 – 12′ ರಿಂದ 78 – 40′ ಪೂರ್ವ ರೇಖಾಂಶದಲ್ಲಿದೆ.
5.ಉತ್ತರದ ತುದಿ – ಬೀದರ ಜಿಲ್ಲೆಯ ಔರಾದ ತಾಲ್ಲೂಕ.
6.ದಕ್ಷಿಣದ ತುದಿ – ಚಾಮರಾಜನಗರ ಜಿಲ್ಲೆ.
7.ಪಶ್ಚಿಮದ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ.
8.ಪೂರ್ವದ ತುದಿ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
9.ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ – 750
10.ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ – 400
11.ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು – ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
12.ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

★★★ ಕರ್ನಾಟಕದ ವಿಸ್ತೀರ್ಣ ★★★

1.ಒಟ್ಟು ವಿಸ್ತೀರ್ಣ – 191791 ಚಕಿಮೀಗಳು.
2.ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ – 5.83
3.ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
4.ಜನಸಂಖ್ಯೆ – 61130704 (2011 ಜನಗಣತಿಯಂತೆ)
5.ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
6.ಕಂದಾಯ ವಿಭಾಗಗಳು – 04
7.ಮಹಾನಗರಗಳು – 10
8.ಜಿಲ್ಲೆಗಳು – 30
9.ತಾಲ್ಲೂಕಗಳು – 177
10.ಹೋಬಳಿಗಳು – 347
11.ಮುನಸಿಪಲ್ ಕಾರ್ಪೋರೇಷನಗಳು – 219
12.ಮಹಾನಗರಗಳು – ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
13.ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ
14.ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ – ಬೆಂಗಳೂರು ನಗರ
15.ನಾಲ್ಕು ಕಂದಾಯ ವಿಭಾಗಗಳು – ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

★★★ ಕರ್ನಾಟಕದ ಒಂದು ಪಕ್ಷಿನೋಟ ★★★

1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್)
2.ರಾಜ್ಯ ಪ್ರಾಣಿ – ಆನೆ.
3.ರಾಜ್ಯ ವೃಕ್ಷ – ಶ್ರೀಗಂಧ.
4.ರಾಜ್ಯಪುಷ್ಪ – ಕಮಲ
5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.
11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
12.ವಿಧಾನಸಭೆಯ ಸದಸ್ಯರ ಸಂಖ್ಯೆ – 225.
13.ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75
14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
16.ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ ಆಯೋಗ.
17.ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
18.ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ.
19.ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್,ನಿಜಲಿಂಗಪ್ಪ
20.ವಿಧಾನಸಭೆಯ ಮೊದಲ ಸಭಾಪತಿ – ವಿ,ವೆಂಕಟಪ್ಪ
21.ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ
22.ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ – ಆರ್ , ವೆಂಕಟರಾಮಯ್ಯ.
23.ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು – ಹಾಸನದಲ್ಲಿ
24.ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು – ಪ್ರಥಮ ಸ್ಥಾನದಲ್ಲಿದೆ.

ಅಂತೆಯೇ ,

2017ರ ಗಣತಿಯ ಪ್ರಕಾರ ಭಾರತದ ಧರ್ಮಾಧಾರಿತ ಜನಸಂಖ್ಯೆ*
         *ಭಾರತಾದ್ಯಂತ ಜನಸಂಖ್ಯೆ*
      ಹಿಂದೂ ಜನಸಂಖ್ಯೆ - 74.33%
      ಮುಸ್ಲಿಂ ಜನಸಂಖ್ಯೆ - 14.20%
             ಕ್ರಿಶ್ಚಿಯನ್ - 5.84%
                  ಸಿಖ್ಖ್ - 1.86%
     ಜನಾಂಗೀಯ ಧರ್ಮಗಳು - 1.35%
               ಬೌದ್ಧ - 0.82%
        ಧರ್ಮವಿಲ್ಲದವರು - 0.48%
             ಇತರ - 0.47% 
               
               *ಆಂಧ್ರಪ್ರದೇಶ*
ಹಿಂದೂ - 89.0%
ಮುಸ್ಲಿಂ - 9.2%
ಕ್ರಿಶ್ಚಿಯನ್ - 1.6%(3.0%)
ಇತರ - 0.2%
             
            *ಅರುಣಾಚಲ ಪ್ರದೇಶ*
ಹಿಂದೂ - 34.6%
ಜನಾಂಗೀಯ ಧರ್ಮಗಳು - 30.7%
ಬೌದ್ಧ - 13.0%
ಕ್ರಿಶ್ಚಿಯನ್ - 18.7%(25%)
ಮುಸ್ಲಿಂ - 1.9%

                   *ಅಸ್ಸಾಂ*
ಹಿಂದೂ - 65%
ಮುಸ್ಲಿಂ - 30.9%
ಕ್ರಿಶ್ಚಿಯನ್ - 3.7%(7.0%)
ಬೌದ್ಧ - 0.2%
ಇತರ - 0.2%

                 *ಬಿಹಾರ*
ಹಿಂದೂ - 83.2%
ಮುಸ್ಲಿಂ - 16.5%
ಕ್ರಿಶ್ಚಿಯನ್ - 0.1%(0.3%)

                 *ಛತ್ತೀಸಘಡ್*
 ಹಿಂದೂ - 94.7%
ಮುಸ್ಲಿಂ - 2.0%
ಕ್ರಿಶ್ಚಿಯನ್ - 1.9%(2.5%)
ಇತರ - 1.5%

                   *ದೆಹಲಿ*
ಹಿಂದೂ - 82%
ಮುಸ್ಲಿಂ - 11.7%
ಸಿಖ್ - 4.0%
ಜೈನ್ - 1.1%
ಕ್ರಿಶ್ಚಿಯನ್ - 0.9%(1.86%)

                 *ಗೋವಾ*
ಹಿಂದೂ - 65.8%
ಕ್ರಿಶ್ಚಿಯನ್ - 26.7%
ಮುಸ್ಲಿಂ - 6.8%
ಇತರ - 0.2%

                  *ಗುಜರಾತ್*
ಹಿಂದೂ - 89.1%
ಮುಸ್ಲಿಂ - 9.1%
ಜೈನ್ - 1.0%
ಕ್ರಿಶ್ಚಿಯನ್ - 0.6%(1.2%)

                *ಹರ್ಯಾಣ*
ಹಿಂದೂ - 88.2%
ಮುಸ್ಲಿಂ - 5.8%
ಸಿಖ್ - 5.5%
ಜೈನ್ - 0.3%
ಕ್ರಿಶ್ಚಿಯನ್ - 0.1%(0.3%)

           *ಹಿಮಾಚಲ ಪ್ರದೇಶ*
ಹಿಂದೂ - 95.4%
ಮುಸ್ಲಿಂ - 2.0%
ಬೌದ್ಧ - 1.3%
ಸಿಖ್ - 1.2%
ಕ್ರಿಶ್ಚಿಯನ್ - 0.1%(0.2%)

             *ಜಮ್ಮು ಕಾಶ್ಮೀರ*
ಮುಸ್ಲಿಂ - 67.0%
ಹಿಂದೂ - 29.6%
ಸಿಖ್ - 2.0%
ಬೌದ್ಧ - 1.1%
ಕ್ರಿಶ್ಚಿಯನ್ - 0.2%(0.3%)

                *ಜಾರ್ಖಂಡ್*
ಹಿಂದೂ - 68.6%
ಮುಸ್ಲಿಂ - 13.8%
ಬುಡಕಟ್ಟು ಧರ್ಮ - 13.0%
ಕ್ರಿಶ್ಚಿಯನ್ - 4.1%(6.0%)

                *ಕರ್ನಾಟಕ*
ಹಿಂದೂ - 83.9%
ಮುಸ್ಲಿಂ - 12.2%
ಕ್ರಿಶ್ಚಿಯನ್ - 1.9%(4.0%)
ಜೈನ್ - 0.8%
ಬೌದ್ಧ - 0.7%

                   *ಕೇರಳ*
ಹಿಂದೂ - 56.2%
ಮುಸ್ಲಿಂ - 24.7%
ಕ್ರಿಶ್ಚಿಯನ್ - 19.0%(35.5%)

               *ಮಧ್ಯ ಪ್ರದೇಶ*
ಹಿಂದೂ - 91.1%
ಮುಸ್ಲಿಂ - 6.4%
ಜೈನ್ - 0.9%
ಕ್ರಿಶ್ಚಿಯನ್ - 0.3%(2.2%)
ಇತರ - 1.2%

                 *ಮಹಾರಾಷ್ಟ್ರ*
ಹಿಂದೂ - 80.4%
ಮುಸ್ಲಿಂ - 10.6%
ಬೌದ್ಧ - 6.0%
ಜೈನ್ - 1.3%
ಕ್ರಿಶ್ಚಿಯನ್ - 1.1%(2%)
ಇತರ - 0.4%

                   *ಮಣಿಪುರ*
ಹಿಂದೂ - 46%
ಕ್ರಿಶ್ಚಿಯನ್ - 34%(41.8%)
ಮುಸ್ಲಿಂ - 8.8%
ಇತರ - 11.2%

                 *ಮೇಘಾಲಯ*
ಕ್ರಿಶ್ಚಿಯನ್ - 70.3%(76%)
ಹಿಂದೂ - 13.3%
ಮುಸ್ಲಿಂ - 4.3%
ಇತರ - 11.8%

              *ಮಿಜೋರಾಮ್*
ಕ್ರಿಶ್ಚಿಯನ್ - 87%(89.6%)
ಬೌದ್ಧ - 7.9%
ಹಿಂದೂ - 3.6%
ಮುಸ್ಲಿಂ - 1.1%

               *ನಾಗಾಲ್ಯಾಂಡ್*
ಕ್ರಿಶ್ಚಿಯನ್ - 90%(93.1%)
ಹಿಂದೂ - 7.7%
ಮುಸ್ಲಿಂ - 1.8%

                  *ಒರಿಸ್ಸಾ*
ಹಿಂದೂ - 94.4%
ಕ್ರಿಶ್ಚಿಯನ್ - 2.4%(2.0%)
ಮುಸ್ಲಿಂ - 2.1%
ಇತರ - 1.1%

                  *ಪಂಜಾಬ್*
ಸಿಖ್ - 59.9%
ಹಿಂದೂ - 36.9%
ಕ್ರಿಶ್ಚಿಯನ್ - 1.2%(2.2%)
ಮುಸ್ಲಿಂ - 1.6%
ಇತರ - 0.4%

                  *ರಾಜಸ್ಥಾನ*
ಹಿಂದೂ - 88.8%
ಮುಸ್ಲಿಂ - 8.5%
ಸಿಖ್ - 1.4%
ಜೈನ್ - 1.2%
ಕ್ರಿಶ್ಚಿಯನ್ - 0.1%(0.4%)

                    *ಸಿಕ್ಕಿಂ*
ಹಿಂದೂ - 60.9%
ಬೌದ್ಧ - 28.1%
ಕ್ರಿಶ್ಚಿಯನ್ - 6.7%(7.5%)
ಮುಸ್ಲಿಂ - 1.4%
ಇತರ - 2.6%

               *ತಮಿಳುನಾಡು*
ಹಿಂದೂ - 88.1%
ಕ್ರಿಶ್ಚಿಯನ್ - 6.1%(19.0%)
ಮುಸ್ಲಿಂ - 5.6%
ಇತರ - 0.2%

                   *ತ್ರಿಪುರ*
ಹಿಂದೂ - 85.6%
ಮುಸ್ಲಿಂ - 8.0%
ಬೌದ್ಧ - 3.1%
ಕ್ರಿಶ್ಚಿಯನ್ - 3.2%(5.5%)

            *ಉತ್ತರ ಪ್ರದೇಶ*
ಹಿಂದೂ -  80.6%
ಮುಸ್ಲಿಂ - 18.5%
ಸಿಖ್ - 0.4%
ಬೌದ್ಧ - 0.2%
ಕ್ರಿಶ್ಚಿಯನ್ - 0.1%(0.3%)
ಜೈನ್ - 0.1%

               *ಉತ್ತರಕಾಂಡ್*
ಹಿಂದೂ - 85%
ಮುಸ್ಲಿಂ - 11.9%
ಸಿಖ್ - 2.5%
ಕ್ರಿಶ್ಚಿಯನ್ - 0.3%(0.6%)
ಬೌದ್ಧ - 0.1%
ಜೈನ್ - 0.1%

             *ಪಶ್ಚಿಮ ಬಂಗಾಳ*
ಹಿಂದೂ - 72.5%
ಮುಸ್ಲಿಂ - 25.2%
ಕ್ರಿಶ್ಚಿಯನ್ - 0.6%(1.2%)
ಬೌದ್ಧ - 0.3%
ಇತರ - 1.3%

2017ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ, ದ್ರೋಣಾಚಾರ್ಯ, ಅರ್ಜನ ಹಾಗೂ ಧ್ಯಾನ್ ಚಂದ್ ಪ್ರಶಸ್ತಿಗಳನ್ನೊಂಡ ಸಂಪೂರ್ಣ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನು ಕ್ರೀಡಾ ಸಚಿವಾಲಯ ಘೋಷಿಸಿದೆ... ✍

2017 ಆಗಸ್ಟ್ 29ರಂದು ರಾಷ್ಟ್ರಪತಿ ಭವನದಲ್ಲಿ ಜರಗಲಿರುವ ವಿಶೇಷ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಅವರಿಂದ ಪ್ರಶಸ್ತಿಗೆ ಭಾಜನವಾಗಲಿದ್ದಾರೆ.
ಸಂಪೂರ್ಣ ಪಟ್ಟಿ ಇಲ್ಲಿದೆ:

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ 2017:

1. ಶ್ರೀ ದೇವೇಂದ್ರ, ವಿಭಾಗ- ಪ್ಯಾರಾ ಅಥ್ಲೀಟ್
2. ಶ್ರೀ ಸರ್ದಾರ್ ಸಿಂಗ್, ವಿಭಾಗ- ಹಾಕಿ

ದ್ರೋಣಾಚಾರ್ಯ ಪ್ರಶಸ್ತಿ 2017:

1. ದಿವಂಗತ ಡಾ.ಆರ್. ಗಾಂಧಿ, ವಿಭಾಗ- ಅಥ್ಲೀಟಿಕ್ಸ್
2. ಹೀರಾ ನಂದ್ ಕಟರಿಯಾ, ವಿಭಾಗ - ಕಬಡ್ಡಿ
3. ಜಿ.ಎಸ್.ಎಸ್.ವಿ ಪ್ರಸಾದ್, ವಿಭಾಗ - ಬ್ಯಾಡ್ಮಿಂಟನ್ (ಜೀವಮಾನ)
4. ಬ್ರಿಜ್ ಭುಷನ್ ಮೊಹಂತಿ, ವಿಭಾಗ - ಬಾಕ್ಸಿಂಗ್ (ಜೀವಮಾನ)
5. ಪಿ.ಎ. ರಾಫೇಲ್, ವಿಭಾಗ- ಹಾಕಿ (ಜೀವಮಾನ),
6. ಸಂಜಯ್ ಚಕ್ರವರ್ತಿ, ವಿಭಾಗ - ಶೂಟಿಂಗ್ (ಜೀವಮಾನ)
7. ರೋಶನ್ ಲಾಲ್, ವಿಭಾಗ- ಕುಸ್ತಿ (ಜೀವಮಾನ)

ಅರ್ಜುನ ಪ್ರಶಸ್ತಿ 2017

1. ವಿ.ಜೆ, ಸುರೇಖಾ, ವಿಭಾಗ- ಆರ್ಚರಿ
2. ಖುಷ್ಬಿರ್ ಕೌರ್, ವಿಭಾಗ - ಅಥ್ಲೇಟಿಕ್ಸ್
3. ಅರೋಕಿಯಾ ರಾಜೀವ್, ವಿಭಾಗ - ಅಥ್ಲೇಟಿಕ್ಸ್
4. ಪ್ರಶಾಂತಿ ಸಿಂಗ್, ವಿಭಾಗ - ಬಾಸ್ಕೆಟ್ಬಾಲ್
5. ಸಬ್. ಲೈಶ್ರಾಂ ದೆಬೆಂದ್ರೊ ಸಿಂಗ್, ವಿಭಾಗ- ಬಾಕ್ಸಿಂಗ್
6. ಚೇತೇಶ್ವರ ಪೂಜಾರ, ವಿಭಾಗ- ಕ್ರಿಕೆಟ್
7. ಹರ್ಮನ್ಪ್ರೀತ್ ಕೌರ್, ವಿಭಾಗ - ಕ್ರಿಕೆಟ್
8. ಬೆಂಬೆಮ್ ದೇವಿ, ವಿಭಾಗ - ಫುಟ್ಬಾಲ್
9. ಎಸ್.ಎಸ್.ಪಿ ಚೌರಾಸಿಯಾ, ವಿಭಾಗ - ಗಾಲ್ಫ್
10. ಎಸ್. ವಿ, ಸುನಿಲ್, ವಿಭಾಗ- ಹಾಕಿ
11. ಜಸ್ವೀರ್ ಸಿಂಗ್, ವಿಭಾಗ - ಕಬಡ್ಡಿ
12. ಪಿ.ಎಲ್. ಪ್ರಕಾಶ್, ವಿಭಾಗ - ಶೂಟಿಂಗ್
13. ಅಮಲ್ರಾಜ್, ವಿಭಾಗ - ಟೇಬಲ್ ಟೆನಿಸ್
14. ಸಾಕೇತ್ ಮೈನೇನಿ, ವಿಭಾಗ - ಟೆನಿಸ್
15. ಸತ್ಯವರ್ತ್ ಕಡಿಯನ್, ವಿಭಾಗ - ಕುಸ್ತಿ
16. ಮರಿಯಪ್ಪನ್ ತಂಗವೇಲು, ವಿಭಾಗ - ಪ್ಯಾರಾ ಅಥ್ಲೀಟ್
17. ವರುಣ್ ಸಿಂಗ್ ಭಾಟಿ,ವಿಭಾಗ - ಪ್ಯಾರಾ ಅಥ್ಲೀಟ್

ಧ್ಯಾನ್ ಚಂದ್ ಪ್ರಶಸ್ತಿ 2017

1. ಭುಪೇಂದ್ರ ಸಿಂಗ್, ವಿಭಾಗ - ಅಥ್ಲೇಟಿಕ್ಸ್
2. ಸೈಯದ್ ಶಾಹೀದ್ ಹಕೀಂ, ವಿಭಾಗ - ಫುಟ್ಬಾಲ್
3. ಸುಮರೈ ಟೆಟೆ, ವಿಭಾಗ - ಹಾಕಿ.

ಭಾರತ–ನೇಪಾಳ ಸಂಬಂಧ ಸುಧಾರಿಸಲಿದೆ ಹೊಸ ಸೇತುವೆ

ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಮೇಚಿ ನದಿಯ ಮೇಲೆ ₹ 158.65 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಭಾರತ–ನೇಪಾಳ ನಡುವಣ ಸಂಬಂಧ ವೃದ್ಧಿಯಾಗುವಲ್ಲಿ ಈ ಸೇತುವೆ ಮಹತ್ವದ ಪಾತ್ರ ವಹಿಸಲಿದೆ ಎಂದು ಮೂಲಗಳು ಹೇಳಿವೆ

* ಮೇಚಿ ನದಿಯ ಮೇಲೆ ಈಗಾಗಲೇ ಇರುವ ಎರಡು ಪಥಗಳ ಸೇತುವೆಯ ಮೇಲಿನ ಸಂಚಾರ ಒತ್ತಡವನ್ನು ತಗ್ಗಿಸಲು ಹೊಸ ಸೇತುವೆ ನಿರ್ಮಿಸಲಾಗುತ್ತದೆ

* ಹಳೆಯ ಸೇತುವೆಯಿಂದ ಉತ್ತರದಲ್ಲಿ 165 ಮೀಟರ್‌ ದೂರದಲ್ಲಿ ಹೊಸ ಸೇತುವೆ ನಿರ್ಮಿಸಲಾಗುತ್ತದೆ

* ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಸಾಲದ ಮೂಲಕ ಭಾರತವೇ ಯೋಜನೆಯ ವೆಚ್ಚ ಭರಿಸಲಿದೆ

* ಭಾರತದ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಸೇತುವೆಯನ್ನು ನಿರ್ಮಿಸಲಿದೆ

* ಭಾರತ–ನೇಪಾಳದ ಮಧ್ಯೆ ಸರಕು ಸಾಗಣೆ ಮತ್ತಷ್ಟು ಸರಾಗವಾಗಲಿದೆ

* ಸರಕು ಸಾಗಣೆ ಸಾಮರ್ಥ್ಯ ಹೆಚ್ಚಳ

* ನೇಪಾಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿನ ವಿಳಂಬ ತಪ್ಪಿಸಲಿದೆ

* ನೇಪಾಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಚೀನಾದ ಯತ್ನಕ್ಕೆ ಹಿನ್ನಡೆಯಾಗಲಿದೆ

* ಎರಡೂ ದೇಶಗಳ ಮಧ್ಯೆ ವಾಣಿಜ್ಯ ಮತ್ತು ಕೈಗಾರಿಕಾ ಸಂಬಂಧ ಸುಧಾರಿಸಲಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿಯಾಗಲಿದೆ

******************************************

24.7 ಮೀಟರ್‌/ ಸೇತುವೆಯ ಅಗಲ

11 ಮೀಟರ್/ ಒಂದು ಕಡೆಯ ರಸ್ತೆಯ ಅಗಲ

0.5 ಮೀಟರ್‌/ ತಡೆಗೋಡೆಯ ಅಗಲ

1.2 ಮೀಟರ್/ ರಸ್ತೆ ವಿಭಜಕದ ಅಗಲ

ಪಾದಚಾರಿ ಮಾರ್ಗ

ಸರ್ವಿಸ್ ರಸ್ತೆ

ಮುಖ್ಯ ಪಥಗಳು

*****************

675 ಮೀಟರ್‌

ಸೇತುವೆಯ ಉದ್ದ

545 ಮೀಟರ್

ನೇಪಾಳದ ಕಡೆಯ ರಸ್ತೆಯ ಉದ್ದ

280 ಮೀಟರ್

ಭಾರತದ ಕಡೆಯ ರಸ್ತೆಯ ಉದ್ದ

ಏಷಿಯನ್ ಹೆದ್ದಾರಿ

ಭಾರತ

ನೇಪಾಳ

ಹಳೆಯ ಸೇತುವೆ

ಪ್ರಸ್ತಾವಿತ ಹೊಸ ಸೇತುವೆ

ಬಾಂಗ್ಲಾದೇಶ

***************

₹ 158.65 ಕೋಟಿ ಯೋಜನೆಯ ಮೊತ್ತ

ಮಾಹಿತಿ: ಪಿಟಿಐ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವಿಸ್ತೃತ ಯೋಜನಾ ವರದಿ

🔴 ಪ್ರಪಂಚದ ಸರೋವರಗಳು ಮತ್ತು ದೇಶಗಳು 

*.ಕ್ಯಾಸ್ಪೀಯನ ಸರೋವರ-  ಇರಾನ್ 

*.ಸುಪೇರೀಯರ ಸರೋವರ-  ಅಮೆರಿಕ

*.ವಿಕ್ಟೋರಿಯಾ ಸರೋವರ-   ತಂಜೇನಿಯ 

*.ಯೂರಲ್ ಸರೋವರ-  ರಷ್ಯ

*.ಮಿಚಿಗನ್ ಸರೋವರ-  ಅಮೆರಿಕ

*.ಬೈಕಲ್ ಸರೋವರ-  ರಷ್ಯ

*.ಗ್ರೇಟಬೀಯರ ಸರೋವರ-  ಕೆನಡಾ

*.ಲದೂಗ ಸರೋವರ-  ರಷ್ಯ

*.ಮಾನಸ ಸರೋವರ-  ಟಿಬೆಟ್ 

*.ಸೋಸೇಕುರ ಸರೋವರ-  ಟಿಬೆಟ್ 

*.ಟಿಟಿಕಾಕ ಸರೋವರ-  ಪೆರು 

*.ರುಡಾಲ್ಫ್ ಸರೋವರ-  ಕೀನ್ಯಾ 

*.ನ್ಯಾಸ ಸರೋವರ-  ತಾಂಜೇನಿಯ 

*.ವಾನೇರ್ಸ ಸರೋವರ-  ಸ್ವಿಡನ

🔴ಪ್ರಪಂಚದ ಪ್ರಮುಖ ಮರುಭೂಮಿಗಳು :-
(Great Deserts of the World)

ಭೂಮಿಯ ಯಾವ ಪ್ರದೇಶದಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೋ ಅಥವಾ ವಾರ್ಷಿಕವಾಗಿ 250 ಮಿ.ಮೀಗಿಂತ ಕಡಿಮೆ ಇರುತ್ತದೋ ಅಂತಹ ಪ್ರದೇಶವನ್ನು # ಮರುಭೂಮಿ ಎಂದು ಕರೆಯುತ್ತಾರೆ.

1.ಅಂಟಾರ್ಟಿಕ ಮರುಭೂಮಿ

2.ಸಹಾರ ಮರುಭೂಮಿ

3.ಆರ್ಟಿಕ್ ಮರುಭೂಮಿ

4.ಅರೇಬಿಯನ್ ಮರುಭೂಮಿ

5.ಕಲಹರಿ ಮರುಭೂಮಿ

6.ಪೆಟಗೋನಿಯನ್ ಮರುಭೂಮಿ

7.ಗ್ರೇಟ್ ವಿಕ್ಟೋರಿಯಾ ಮರುಭೂಮಿ

8.ಗ್ರೇಟ್ ಬಸಿನ್ ಮರುಭೂಮಿ

9.ಸೈರಿಯನ್ ಮರುಭೂಮಿ

1⃣ ಅಂಟಾರ್ಟಿಕ ಮರುಭೂಮಿ

💢 ಅಂಟಾರ್ಟಿಕ ಮರುಭೂಮಿಯು ದಕ್ಷಿಣ ಧ್ರುವದಲ್ಲಿ ಕಂಡು ಬರುವ ಮರುಭೂಮಿಯಾಗಿದೆ.

💢 ಈ ಮರುಭೂಮಿಯು ಜಗತ್ತಿನ ವಿಸ್ತೀರ್ಣದಲ್ಲಿ ಅತಿ ದೊಡ್ಡ ಮರುಭೂಮಿಯಾಗಿದ್ದು ಶೀತಮರುಭೂಮಿಯಾಗಿದ. ಈ ಮರುಭೂಮಿಯು ಹಿಮದಿಂದ ಕೂಡಿದ್ದು, ಸರಾಸರಿ 1.6 ಕಿ.ಮೀ ದಪ್ಪದ ಹಿಮವನ್ನು ಒಳಗೊಂಡಿದೆ. ಇಲ್ಲಿ ಪೆಂಗ್ವಿನ್, ನೀಲಿ ತಿಮಿಂಗಿಲ, ಸೀಲ್ ಪ್ರಮುಖ ಪ್ರಾಣಿಗಳಿವೆ.

2⃣ ಸಹಾರ ಮರುಭೂಮಿ

💢 ಸಹರಾ ಮರುಭೂಮಿಯು ಉತ್ತರ ಆಫ್ರಿಕಾ ಖಂಡದಲ್ಲಿದೆ. ಈ ಮರುಭೂಮಿಯನ್ನು "ಗ್ರೇಟ್ ಡೆಸರ್ಟ್" ಎಂದು ಕರೆಯುವರು,  

💢 ಇದು ಅಲ್ಜೀರಿಯಾ, ಚಾದ್, ಈಜಿಪ್ಪ್, ಲಿಬಿಯಾ ಎರಿಟ್ರಿಯಾ, ಮಾಲಿ, ಮಾಯುರಟಾನಿಯ, ಮಾರಕೋ, ನೈಜಿರ್, ಸುಡಾನ್ ಟುನೇಶಿಯಾ ವೆಸ್ಟರ್ ಸಹಾರ್ ದೇಶಗಳಲ್ಲಿ ಹರಡಿಕೊಂಡಿದೆ.

💢ಇದರ ವಿಸ್ತೀರ್ಣ 9,100,000 ಚ.ಕಿ.ಮೀ ಆಗಿದ್ದು ಜಗತ್ತಿನ 2 ನೇ ಅತಿದೊಡ್ಡ ಮರುಭೂಮಿ, ಜಗತ್ತಿನ ಅತಿ ದೊಡ್ಡ "ಉಷ್ಣ ಮರುಭೂಮಿ" ಆಗಿದೆ. 

💢ಇಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಒಂಟೆ, ಚಿರತೆ, ನರಿ, ಹಲ್ಲಿ, ಆಫ್ರಿಕನ್ ಕಾಡು ನಾಯಿ, ಉಷ್ಟ್ರಪಕ್ಷಿ, ಮರುಭೂಮಿ ಮೊಸಳೆ.

3⃣ ಆರ್ಟಿಕ್ ಮರುಭೂಮಿ

💢 ಆರ್ಟಿಕ್ ಮರುಭೂಮಿ ಭೂಮಿಯ ಉತ್ತರ ದ್ರುವದಲ್ಲಿ ಕಂಡು ಬರುತ್ತದೆ. ಈ ಮರುಭೂಮಿ ಜಗತ್ತಿನ 3ನೇ ದೊಡ್ಡ ಮರುಭೂಮಿಯಾಗಿದ್ದು ಹಾಗೂ 2ನೇ ಅತಿ ದೊಡ್ಡ ಶೀತ ಮರುಭೂಮಿಯಾಗಿದೆ. 

💢 ಇದರ ವಿಸ್ತೀರ್ಣವು 2,600,000 ಚ.ಕಿ.ಮೀಗಳಾಗಿವೆ. ಈ ಮರುಭೂಮಿ ಹಿಮದಿಂದ ಕೂಡಿದೆ.

💢 ಈ ಮರುಭೂಮಿಯು ಅರ್ಟಿಕ್ ಸಾಗರ, ಕೆನಡಾ, ರಷ್ಯಾ, ಗ್ರೀನಲ್ಯಾಂಡ್, ಯುನೈಟೆಡ್ ಸ್ಪೇಟ್ಸ್, ನಾರ್ವೆ, ಸ್ಪೀಡನ್, ಪಿನಲ್ಯಾಂಡನ್ ಸ್ಪಲ್ಪ ಭಾಗವನ್ನು ಒಳಗೊಂಡಿದೆ.

💢 ಇಲ್ಲಿನ ಪ್ರಮುಖ ಪ್ರಾಣಿಗಳೆಂದರೆ ಆರ್ಟಿಕ್ ಮೊಲಸಾರಂಗ, ಅರ್ಟಿಕ್ ನರಿ ಮತ್ತು ತೋಳ, ಧ್ರುವ ಕರಡಿ, ಸೀಲ್, ಮುಂತಾದವುಗಳು. 

💢ಈ ಮರುಭೂಮಿಯು ಇತ್ತೀಚಿಗೆ ಜಾಗತಿಕ ತಾಪಮಾನ ಫಲವಾಗಿ ಇಲ್ಲಿನ ನೀರ್ಲಗಲ್ಲುಗಳು ಕರಗುತ್ತಿದೆ.

4⃣ ಅರೇಬಿಯನ್ ಮರುಭೂಮಿ

💢 ಈ ಮರುಭೂಮಿಯು ಮಧ್ಯ ಪೂರ್ವ ಪ್ರಾಂತ್ಯದಲ್ಲಿದ್ದು, ಇದು ಯಮನ್ ದೇಶದಿಂದ ಪರ್ಷಿಯನ್ ಗಲ್ಪ್ ವರೆಗೂ ಮತ್ತು ಒಮಾನ್ ನಿಂದ ಜೋರ್ಡಾನ ಮತ್ತು ಇರಾಕ್ ವರೆಗೂ ವಿಸ್ತರಿಸಿದೆ.

💢 ಇದು ಅರೆಬಿಯನ್ ಉಪಖಂಡದಲ್ಲಿ ವ್ಯಾಪಿಸಿದೆ. ಇದು ಜೋರ್ಡಾನ್, ಕುವೈತ್, ಇರಾಕ್, ಕತಾರ್, ಉಮ್ಮಾನ್, ಸೌದಿ ಅರೇಬಿಯಾ, ಯುನೈಟೆಡ್ ಎಮರೈಟಿಸ್, ಎಮನ್ ದೇಶದಲ್ಲಿ ವ್ಯಾಪಿಸಿದೆ.

💢 ಇದರ ವಿಸ್ತೀರ್ಣವು 2,330,000 ಚ.ಕಿ.ಮೀ, ಇಲ್ಲಿ ತೈಲ ಸ್ವಾಭಾವಿಕ ಅನಿಲ, ಪಾಸ್ಪೇಟ್, ಮತ್ತು ಗಂಧಕದ ಸಂಪನ್ಮೂಲವಿದೆ. ಈ ಮರುಭೂಮಿ ಬಹುತೇಕ ಸೌದಿ ಅರೇಬಿಯಾದಲ್ಲಿ ವಿಸ್ತರಿಸಿಕೊಂಡಿದೆ.

5⃣ ಕಲಹರಿ ಮರುಭೂಮಿ

💢 ಈ ಮರುಭೂಮಿಯು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದೆ. ಈ ಮರುಭೂಮಿಯಲ್ಲಿ ಬಾಡ್ಸಾನಾ, ನಮೀಬಿಯಾ, ದಕ್ಷಿಣ ಆಪ್ರ್ಹಿಕಾ ದೇಶಗಳಲ್ಲಿ ವ್ಯಾಪಿಸಿದೆ.

💢 ಈ ಮರುಭೂಮಿಯಲ್ಲಿ ಚೋಬೆ ನ್ಯಾಷನಲ್ ಪಾರ್ಕ, ಸೆಂಟ್ರಲ್ ಕಲಹರಿ ಗೇಮ್ ರಿಸರ್ವ, ಕಲಹರಿ ಬೇಸಿನ್ಸ್, ಕಲಹರಿ ಜೇಮ್ಸ್ ಬಾಕ್ ನ್ಯಾಷನಲ್ ಪಾರ್ಕ, ಮಾಕಗಾಡಿ ಪಾನ್ಸ್ ಸ್ಥಳಗಳು ಕಂಡು ಬರುತ್ತವೆ.

💢 ಕಲಹರಿ ಮರುಭೂಮಿಯ ವಿಸ್ತೀರ್ಣ 900,000 ಚ.ಕಿ.ಮೀ ಈ ಮರುಭೂಮಿ ಪಕ್ಕದಲ್ಲಿ ಅರೆಂಜ್ ನದಿಯು ಹರಿಯುತ್ತದೆ. ಬ್ರಾಂಡ್ ಬರ್ಗ ಪರ್ವತವು ಅತಿ ದೊಡ್ಡ ಪರ್ವತವಾಗಿದೆ 8560 ಅಡಿ.

6⃣ ಪೆಟಗೋನಿಯನ್ ಮರುಭೂಮಿ

💢 ಈ ಮರುಭೂಮಿಯು ವಿಸ್ತೀರ್ಣದಲ್ಲಿ ಜಗತ್ತಿನ 7ನೇ ದೊಡ್ಡ ಮರುಭೂಮಿ. ಈ ಮರುಭೂಮಿಯ ವಿಸ್ತೀರ್ಣ 670,000 ಚ.ಕಿ.ಮೀಗಳು.

💢 ಈ ಮರುಭೂಮಿಯು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದ್ದು, ಪ್ರಮುಖವಾಗಿ ಅರ್ಜೆಂಟೈನಾ ಮತ್ತು ಚಿಲಿ ದೇಶಗಳಲ್ಲಿ ವ್ಯಾಪಿಸಿದೆ.

💢 ಇಲ್ಲಿ ಹುಲ್ಲುಗಳಿಗೆ ಬದಲಾಗಿ ಪೊದೆಗಳು ಕಂಡು ಬರುತ್ತದೆ. ಈ ಮರುಭೂಮಿಯಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಗೂಬೆ, ಮರುಭೂಮಿ ಹಲ್ಲಿ, ಪಿಗ್ಮಿ ಆರಿಡಿಲೋ ಮುಂತಾದಗಳು.

7⃣ ಗ್ರೇಟ್ ವಿಕ್ಟೋರಿಯಾ ಮರುಭೂಮಿ

💢 ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಮರುಭೂಮಿಯಾಗಿದೆ, ಇದು ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ ಸಣ್ಣ ಸಣ್ಣ ಮರಳಿನ ಬೆಟ್ಟೆಗಳು ಕಂಡು ಬರುತ್ತದೆ.

💢 1875ರಲ್ಲಿ ಬ್ರಿಟಿಷ್ ನಾವಿಕ ಎರನೆಸ್ಟ್ ಗೆಲಿಸ್ ಮೊಟ್ಟ ಮೊದಲ ಬಾರಿಗೆ ಈ ಮರುಭೂಮಿಯಲ್ಲಿ ಹಾದು ಹೋದ ಯುರೋಪಿಯೆನ್ ಆಗಿದ್ದಾರೆ.

💢 ಈ ಮರುಭೂಮಿಯಲ್ಲಿ ವರ್ಲ್ಡ ವೈಡ್ ಲೈಫ್ ಫಂಡ್ ನ ಎಕೋ ರಿಜನ್ ಆಗಿದೆ. ಈ ಮರುಭೂಮಿಯಲ್ಲಿ ಗ್ರೇಟ್ ಡೆಸರ್ಟ ಸ್ಕಿಂಕ್ ಮತ್ತು ಸ್ಯಾಂಡಿ ಹಿಲ್ ಡುನಾಲ್ಡ್ ಎಂಬ ಪ್ರಾಣಿ ಕಂಡು ಬರುತ್ತದೆ.

8⃣ ಗ್ರೇಟ್ ಬಸಿನ್ ಮರುಭೂಮಿ

💢 ಈ ಮರುಭೂಮಿಯು ಉತ್ತರ ಅಮೇರಿಕಾದಲ್ಲಿ ವ್ಯಾಪಿಸಿದೆ. ಈ ಮರುಭೂಮಿಯು 492,000 ಕಿ.ಮೀ ವಿಸ್ತೀರ್ಣ ಹೊಂದಿದೆ.

💢 ಈ ಮರುಭೂಮಿಯು ನವೆಡಾ, ಕ್ಯಾಲಿಪೋರ್ನಿಯಾ, ಉತ್ತಾ ದೇಶಗಳಿಂದ ಕೊಲೊಡೊ ನದಿಯವರೆಗೆ ವ್ಯಾಪಿಸಿದೆ. ಇದು ಪ್ರಮುಖವಾಗಿ ಯುನೈಟೆಡ್ ಸ್ಟೇಟ್ಸ್ ದೇಶದಲ್ಲಿ ಹರಡಿಕೊಂಡಿದೆ.

💢 ಇಲ್ಲಿ ಆಲ್ಟ್ರಿಪ್ಲೆಕ್ಸ್ ಎಂಬ ವಿಶೇಷ ಜಾತಿಯ ಸಸ್ಯವು ಕಂಡು ಬರುತ್ತದೆ. ಸೆಜೆ ಬ್ರಷ್ ಎಂಬುದು ಈ ಮರುಭೂಮಿಯಲ್ಲಿ ಕಂಡುಬರುವ ಪ್ರಮುಖವಾದಂತಹ ಸಸ್ಯವಾಗಿದೆ.

9⃣ ಸೈರಿಯನ್ ಮರುಭೂಮಿ

💢 ಈ ಮರುಭೂಮಿಯು ಮಧ್ಯಪೂರ್ವ ಪ್ರಾಂತ್ಯದಲ್ಲಿ ಕಂಡು ಬರುತ್ತದೆ. ಈ ಮರುಭೂಮಿಯು ಜಗತ್ತಿನ ಅತಿ ದೊಡ್ಡ ಮರುಭೂಮಿಯಾಗಿದೆ.

💢 ಇದರ ವಿಸ್ತೀರ್ಣ 520,000 ಆಗಿದೆ. ಈ ಮರುಭೂಮಿಯು ಸೈರಿಯಾ, ಇರಾಕ್, ಜೋಡಾರ್ನ, ಸೌದಿ ಅರೇಬಿಯಾಗಳಲ್ಲಿ ಕಂಡು ಬರುತ್ತದೆ.

*2017 ರ ಪ್ರಮುಖ ಜಾಗತಿಕ ಸೂಚ್ಯಂಕ ಗಳಲ್ಲಿ ಭಾರತದ ಸ್ಥಾನ*
--------------------
1) ಜಾಗತಿಕ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ- 1
2) ನವೀಕರಿಸಬಲ್ಲ ಇಂಧನ ಸೂಚ್ಯಂಕ- 2
3) ವಿಶ್ವ ಸ್ಪರ್ಧಾತ್ಮಕ ಸೂಚ್ಯಂಕ- 45
4) ಸುಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ-116
5) ವಿಶ್ವ ಸಂತೋಷ ಸೂಚ್ಯಂಕ- 122
6) ಮಾನವ ಅಭಿವೃದ್ಧಿ ಸೂಚ್ಯಂಕ-131
7) ಜಾಗತಿಕ ಶಾಂತಿ ಸೂಚ್ಯಂಕ--137
8) ಅಂತರಾಷ್ಟ್ರೀಯ ಆರ್ಥಿಕ ಅನುಸೂಚಿ- 143

👉ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪಾರ್ಕ್‌ಗಳು
೧) ಫುಡ್ ಪಾರ್ಕ್- ತುಮಕೂರು
೨)ರೈಸ್‌ ಪಾರ್ಕ್- ಕಾರಟಗಿ
೩) ಅಕ್ಷಯ ಆಹಾರ ಪಾರ್ಕ್- ಹಿರಿಯೂರು
೪)ಸ್ಪೈಸ್ ಪಾರ್ಕ್- ಬ್ಯಾಡಗಿ
೫) ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ
೬)ಸಾಗರೊತ್ಪನ್ನ ಪಾರ್ಕ್-ಮಂಗಳೂರ
೭)ಇನ್ನೊವ ಅಗ್ರಿ ಬಯೊಪಾರ್ಕ- ಮಾಲೂರು
೮)ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ
೯)ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು
೧೦)ತೆಂಗು ಸಂಸ್ಕರಣಾಘಟಕ- ತಿಪಟೂರು ತಾಲೂಕಿನ  ಕೊನೇಹಳ್ಳಿ

ಅಣೆಕಟ್ಟು- ಸ್ಥಳ- ನದಿ- ಜಲಾಶಯ

✍✍ಭಾಕ್ರನOಗಲ್ ಅಣೆಕಟ್ಟು
.ಸ್ತಳ -ಬಿಲಸಪೂರ(ಹಿಮಾಚಲ ಪ್ರದೇಶ )
.ನದಿ -ಸಟ್ಲೇಜ 
.ಜಲಶಯನ ಹೆಸರು -ಗೋವಿಂದ ಸಾಗರ ಜಲಶಯ.

✍✍ಹಿರಾಕುಡ್ ಅಣೆಕಟ್ಟು 
.ಸ್ತಳ -ಸಂಬಲಪುರ (ಒಡಿಶಾ )
.ನದಿ -ಮಹಾನದಿ.

✍✍ಮೇಟ್ಟುರು ಅಣೆಕಟ್ಟು 
.ಸ್ತಳ -ಮೇಟ್ಟುರು (ಸೇಲಮ ) ತಮಿಳುನಾಡು 
.ನದಿ -ಕಾವೇರಿ 
.ಜಲಶಯದ ಹೆಸರು -ಸ್ಟೇನ್ಲಿ ಜಲಶಯ.

✍✍ನಾಗಾರ್ಜುನ ಅಣೆಕಟ್ಟು 
.ಸ್ತಳ -ನೇಲಗೋಂಡ ಜಿಲ್ಲೆ(ಆOದ್ರಪ್ರದೇಶ )
.ನದಿ -ಕೃಷ್ಣ.

✍✍ಇಡುಕ್ಕಿ ಆಣೇಕಟ್ಟು 
.ಸ್ತಳ -ಇಡುಕ್ಕಿ (ಕೇರಳ )
.ನದಿ -ಪೆರಿಯಾರ್.

✍✍ರಾಮ ಗಂಗಾ ಅಣೆಕಟ್ಟು 
.ಸ್ತಳ -ಕಲಾಗಡ (ಉತ್ತರಾಖಂಡ )
.ನದಿ -ರಾಮಗOಗಾ.

✍✍ಪೋಡOಪಾಡು ಅಣೆಕಟ್ಟು 
.ಸ್ತಳ -ನೀಜಮಾಬಾದ (ತೆಲಂಗಾಣ )
.ನದಿ -ಗೋದಾವರಿ.

✍✍ಊಕ್ಕೈ ಅಣೆಕಟ್ಟು 
ಸ್ತಳ -ಊಕ್ಕೈ (ಗುಜರಾತ್ )
.ಜಲಶಯದ ಹೆಸರು -ವಲ್ಲಭ ಸಾಗರ್ 
ನದಿ -ತಪತಿ.

✍✍ಪೋಂಗ ಅಣೆಕಟ್ಟು 
.ಸ್ತಳ -ತಲವಾರ ( ಹಿಮಾಚಲ ಪ್ರದೇಶ )
.ನದಿ -ಬಿಯಾಸ್.

✍✍✍ ಗಾಂಧಿ ಸಾಗರ್ ಅಣೆಕಟ್ಟು 
.ಸ್ತಳ -ಮ್ಯಂಡ್ ಸಾರ್ 
ನದಿ - ಚೇಂಬಲ ಯಮೂನ ನದಿ.

✍✍ಕೋಯನ್ನ ಅಣೆಕಟ್ಟು 
.ಸ್ತಳ -ಕೊಯ್ನ (ಮಹರಾಷ್ಟ)
.ನದಿ -ಕೋಯನ್ 
.ಜಲಶಯದ ಹೆಸರು - ಶಿವಾಜಿ ಸಾಗರ್ ಸರೋವರ

✍✍ಅಲಮಟ್ಟಿ ಅಣೆಕಟ್ಟು 
.ಸ್ತಳ -ಅಲಮಟ್ಟಿ ( ಕರ್ನಾಟಕ )
.ನದಿ -ಕೃಷ್ಣ 
.ಜಲಶಯದ ಹೆಸರು -ಲಾಲ್ ಬಹುದೂರ ಶಾಸ್ತ್ರಿ.

✍✍ತವಾ ಅಣೆಕಟ್ಟು
.ಸ್ತಳ -ಹೊಸಂಗಾಬಾದ 
( ಮಧ್ಯ ಪ್ರದೇಶ )
.ನದಿ -ತವಾ

✍✍ಜಯಕವಡಿ ಅಣೆಕಟ್ಟು 
.ಸ್ತಳ -ಜಯಕವಡಿ (ಮಹರಸ್ಟ್ರ )
.ನದಿ -ಗೋದವರೀ 
.ಜಲಶಯದ ಹೆಸರು -ನಾಥಸಾಗರ್ ಜಲಶಯ

✍✍ರಿಹಂದ ಅಣೆಕಟ್ಟು 
.ಸ್ತಳ -ಸೂನಭದ್ರ
( ಉತ್ತರ ಪ್ರದೇಶ )
.ನದಿ -ರಿಹಂದ

✍✍ಸರ್ದರ ಸರೋವರ ಅಣೆಕಟ್ಟು
.ಸ್ತಳ -ನವಗO (ಗುಜರಾತ್)
.ನದಿ - ನರ್ಮದಾ

✍✍✍ರಣ ಪ್ರತಾಪ್ ಸಾಗರ್ ಅಣೆಕಟ್ಟು
.ಸ್ತಳ -ರವಬತ (ರಾಜಸ್ತಾನ್ )

 

ಉತ್ತರ ಭಾರತದ ನದಿಗಳು :
1.ನದಿ :— ಸಿಂಧೂ (ಇಂಡಸ್ ನದಿ) 
●.ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್
●.ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ
●.ವ್ಯಾಪ್ತಿ ರಾಜ್ಯಗಳು :—  (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್
●.ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ
●.ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.
●.ವಿಶೇಷತೆಗಳು :— 
1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.
2.ನದಿ :— ಗಂಗಾ
●.ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್
●.ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್
●.ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,
●.ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)
●.ವಿಶೇಷತೆಗಳು :—  
1.ಭಾರತದ ಅತೀ ಉದ್ದವಾದ ನದಿ
2.ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.
3.ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.
4.ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ.
3.ನದಿ :— ಬ್ರಹ್ಮಪುತ್ರ
●.ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್
●.ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
●.ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್
●.ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)
●.ವಿಶೇಷತೆಗಳು :—  
1. ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.
2.. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.
3. ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.
5.ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.
4..ನದಿ :— ಯಮುನಾ 
●.ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್.
●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,
●.ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್.
●.ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸಾಗರ ಅಣೆಕಟ್ಟು (ಚಂಬಲ್),
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಪನ್ನಾ ರಾಷ್ಟ್ರೀಯ ಉದ್ಯಾನ (ಕೆನ್ ನದಿ)
●.ವಿಶೇಷತೆಗಳು :—  
1. ಭಾರತದ ಅತ್ಯಂತ ಉದ್ದವಾದ ಉಪನದಿ (ಗಂಗಾ)
5..ನದಿ :— ಸಬರಮತಿ
●.ನದಿಯ ಉಗಮ ಸ್ಥಾನ :— ಉದಯಪುರ್,  ರಾಜಸ್ಥಾನ .
●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ.
●.ವ್ಯಾಪ್ತಿ ರಾಜ್ಯಗಳು :— ಗುಜರಾತ್, ರಾಜಸ್ಥಾನ
●.ಪ್ರಮುಖ ಉಪನದಿಗಳು :— ವಕಾಲ್, ಸೇಯ್ ನಾಡಿ, ಮಧುಮತಿ, ಹರ್ನಾವ್, ಹಾಥ್ ಮತಿ
●.ಪ್ರಮುಖ ಅಣೆಕಟ್ಟುಗಳು :— ಧರೋಯಿ ಅಣೆಕಟ್ಟು
★ ದಕ್ಷಿಣ ಭಾರತದ ನದಿಗಳು :
1.ನದಿ :— ಕೃಷ್ಣಾ  (ದ.ಭಾರತದ ಪೂರ್ವಕ್ಕೆ ಹರಿಯುವ ನದಿ) 
●.ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ.
●.ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)
●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
●.ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ.
●.ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು 
●.ವಿಶೇಷತೆಗಳು :— 
ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ.
2..ನದಿ :— ನರ್ಮದಾ (ರೇವಾ)  (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ) 
●.ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ
●.ಕ?

Wednesday, 8 April 2020

ಮೇ 10 ಮಕ್ಕಳ ನಾಟಕ ವೀಕ್ಷಿಸಿ.

https://youtu.be/wKXUbyCgH1c
ಮಕ್ಕಳ ಶೈಕ್ಷಣಿಕ ಸಮಸ್ಯೆ, ಪಾಲಕರ ಒತ್ತಡ, ಪರೀಕ್ಷಾ ಪೊಬಿಯಾ , ಖಿನ್ನತೆ ವಸ್ತುವಿಷಯ ಕೇಂದ್ರಿತ ಮಕ್ಕಳ ನಾಟಕ ಈ ಮೇಲಿನ  ನೀಲಿ ಲಿಂಕ್ ಕ್ಲಿಕ್ ಮಾಡಿ ನೋಡಿ.

ಹೆಚ್ಚಿನ ಶೈಕ್ಷಣಕ, ಕಲೆ-ಸಾಹಿತ್ಯ ವಿಡಿಯೋಗಳಿಗೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ

Friday, 20 December 2019

ಟಿ. ಇ .ಟಿ ಪರೀಕ್ಷೆ ತಯಾರಿಗೆ ಸರಳ ಮಾರ್ಗಗಳು

ವೆಂಕಟಸುಬ್ಬರಾವ್.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದರೆ ಕರ್ನಾಟಕ ಟಿ.ಇ.ಟಿ. (ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಗೆ ಬೇರೆಯದೇ ರೀತಿಯ ಪ್ರಾಮುಖ್ಯತೆ ಇದೆ.


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರ ಹುದ್ದೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಟಿ.ಇ.ಟಿ.! ಹೀಗಾಗಿ, ಇಲ್ಲಿ ಕೇವಲ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ, ವೇಗವಾಗಿ ಉತ್ತರಿಸುವುದು ಮಾತ್ರವಲ್ಲ, ಮಕ್ಕಳ ಮನಸ್ಸನ್ನು ಸರಿಯಾದ ರೀತಿಯಲ್ಲಿ ಅರಿತು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಿಗೆ ವಿದ್ಯಾಭ್ಯಾಸದ ಜೊತೆಗೆ, ಜೀವನದ ಮೌಲ್ಯಗಳು, ಆದರ್ಶಗಳನ್ನು ಕಲಿಸಬೇಕಾದ ಗುರುತರವಾದ ಜವಾಬ್ದಾರಿ ಇರುತ್ತದೆ. ಅವರಿಗೆ ಮೌಲ್ಯಗಳನ್ನು ಕಲಿಸುವುದಕ್ಕೆ ಮೊದಲು ಶಿಕ್ಷಕರು ಅವುಗಳನ್ನು ಪಾಲಿಸಬೇಕಾಗುತ್ತದೆ.


ಈ ಸಮಯದಲ್ಲಿ ತಾವು ಟಿ.ಇ.ಟಿ ಪರೀಕ್ಷೆಗೆ ಸಂಪೂರ್ಣ ತಯಾರಾಗಿದ್ದೀರಿ ಮತ್ತು ಈ ಲೇಖನವನ್ನು ಓದುವ ಮೊದಲು, ಟಿ.ಇ.ಟಿ ಪರೀಕ್ಷೆಯ ವಿಷಯಗಳನ್ನು ಸರಿಯಾಗಿ ಅರ್ಥೈಸಿ ಓದಿಕೊಂಡಿದ್ದೀರಿ ಎಂದು ಭಾವಿಸುತ್ತಾ, ಓದಿದ ವಿಷಯಗಳನ್ನು ಸರಳವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಕೆಲವು ವಿಧಾನಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹಲವಾರು ವಿಧಾನಗಳಿವೆ, ಈ ಕೆಳಗಿನ ಕೆಲವು ವಿಧಾನಗಳು ತಮಗೆ ಸಹಾಯಕವಾಗಬಹುದು.


ಪದಜೋಡಣೆ ವಿಧಾನ


ಈ ವಿಧಾನದಲ್ಲಿ, ತಾವು ಓದಿದ ವಿಷಯಗಳನ್ನು ಸರಳ ಪದಗಳಾಗಿ ಅಥವಾ ಸರಳ ಅರ್ಥಪೂರ್ಣ ವಾಕ್ಯಗಳಾಗಿ ಬದಲಾಯಿಸಿ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಈ ವಿಧಾನವು ಸಮಾಜಶಾಸ್ತ್ರ, ವಿಜ್ಞಾನ ಹಾಗೂ ಭಾಷಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿ.


ಉದಾ : ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರೇನು?


ಈ ಕೆಳಗಿನ ಸರಳವಾಕ್ಯದ ಸಹಾಯದಿಂದ ಈ ಪ್ರಶ್ನೆಯ ಉತ್ತರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು,


ಅವರಂಗಿ ಜೇಬು ಮುರಿದು ಹೋಯಿತು, ಸೂಜಿ ದಾರದಿಂದ ಹೊಲಿ!


ಇಲ್ಲಿ ಅವರಂಗಿ ಜೇಬು ಔರಂಗಜೇಬ್,


ಮುರಿದು - ಮುರಾದ್


ಸೂಜಿ - ಶೂಜ


ದಾರ - ದಾರ


ಉತ್ತರ: ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರು ಔರಂಗಜೇಬ್, ಮುರಾದ್, ಶೂಜ, ದಾರ !


ಎಷ್ಟು ಸರಳ ಅಲ್ಲವೇ !


ಹೀಗೆ ಪದ ಜೋಡಣೆ ವಿಧಾನದಿಂದ ಹಲವಾರು ವಿಷಯಗಳನ್ನು ಸರಳವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.


ಈ ವಿಧಾನದಿಂದ ತಾವು ಓದಿದ ವಿಷಯಗಳ ಮುಖ್ಯ ಅಂಶಗಳನ್ನು ಸರಳವಾದ ವಾಕ್ಯಗಳ ಸಹಾಯದಿಂದ ನೆನಪಿನಲ್ಲಿಟ್ಟುಕೊಳ್ಳಬಹುದು. ತಮ್ಮದೇ ವಾಕ್ಯಗಳಾದ್ದರಿಂದ ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಹೀಗೆ ತಾವು ಮೂಡಿಸಿದ ವಾಕ್ಯಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಈ ವಾಕ್ಯಗಳು, ಟಿ.ಇ.ಟಿ. ಪರೀಕ್ಷೆಯಷ್ಟೇ ಅಲ್ಲದೆ, ಮುಂದೆ, ನಿಮ್ಮ ತರಗತಿಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತವೆ.


ಮೈಂಡ್ ಮ್ಯಾಪ್ ವಿಧಾನ


ನಮ್ಮ ಮೆದುಳು ಚಿತ್ರಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಿಧಾನದಲ್ಲಿ ನೀವು ಓದಿದ ಬಹಳಷ್ಟು ವಿಷಯಗಳನ್ನು ಚಿತ್ರೀಕರಿಸಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಇದೊಂದು ಅತ್ಯಂತ ಸರಳ ವಿಧಾನ. ಆದರೆ ಬಹಳ ಪರಿಣಾಮಕಾರಿ ವಿಧಾನ. ಈ ವಿಧಾನವು ಭಾಷೆ, ಸಮಾಜಶಾಸ್ತ್ರ ಹಾಗೂ ವಿಜ್ಞಾನದ ವಿಷಯಗಳಿಗೆ ಬಹಳ ಉಪಯುಕ್ತ.


ಇಲ್ಲಿ ಒಂದು ಪಾಠದ ಸರಳ ಚಿತ್ರವನ್ನು ಸಂಪೂರ್ಣವಾಗಿ ಒಂದೇ ಹಾಳೆಯಲ್ಲಿ ಬಿಡಿಸಿಟ್ಟುಕೊಳ್ಳಬಹುದು. ಇದರಿಂದ, ಪರೀಕ್ಷೆಗೆ ಮೊದಲು ಪುನಾರಾವರ್ತನೆಯು ಬಹಳ ಸುಲಭವಾಗುತ್ತದೆ ಹಾಗೂ ಪರೀಕ್ಷೆಯ ಸಮಯದಲ್ಲಿ ಈ ಚಿತ್ರವನ್ನು ಅತ್ಯಂತ ಸುಲಭವಾಗಿ ನೆನಪಿಸಿಕೊಳ್ಳಬಹುದು ಹಾಗೂ ಪ್ರಶ್ನೆಗಳಿಗೆ ಅತ್ಯಂತ ಸುಲಭವಾಗಿ ಉತ್ತರಿಸಬಹುದು. ಈ ವಿಧಾನವು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೇ ಮುಂದೆ ತರಗತಿಗಳಲ್ಲಿಯೂ ಉಪಯೋಗಕ್ಕೆ ಬರುತ್ತದೆ.


ಮೈಂಡ್ ಮ್ಯಾಪ್‌ನ ಒಂದು ಉದಾಹರಣೆ:


ಸರಳವಾದ ತಾಳೆ ನೋಡುವ ಪದ್ಧತಿ


ಈ ತಾಳೆ ನೋಡುವ ಪದ್ಧತಿಯಿಂದ ಗಣಿತ (ಅಂಕಗಣಿತ ಮತ್ತು ಬೀಜಗಣಿತ)ದ ಸಮಸ್ಯೆಗಳ ಉತ್ತರಗಳನ್ನು ಅತ್ಯಂತ ವೇಗವಾಗಿ ತಾಳೆ ನೋಡಲು ಸಹಾಯಕವಾಗುತ್ತದೆ. ಈ ವಿಧಾನವು ಕೇವಲ ತಾಳೆ ನೋಡುವ ವಿಧಾನ. ಇದರಿಂದ ಬಹು ಆಯ್ಕೆ ಪ್ರಶ್ನೆಗಳಿಗೆ ಸುಲಭವಾಗಿ, ಕೇವಲ ಉತ್ತರಗಳನ್ನು ಗಮನಿಸುವುದರ ಮೂಲಕ ಸರಿಯಾದ ಉತ್ತರವನ್ನು ಕಂಡುಹಿಡಿಯಬಹುದು! ಇದು ವೇದಗಣಿತದ ವಿಧಾನ.


ಹೀಗೆ ತಾಳೆ ನೋಡಿ


ಈ ವಿಧಾನದಲ್ಲಿ ಎಲ್ಲ ಸಂಖ್ಯೆಗಳನ್ನೂ ಒಂದಂಕಿಯಾಗಿ ಪರಿವರ್ತಿಸಿ. ಒಂದಂಕಿಯಾಗಿ ಪರಿವರ್ತಿಸಲು ಕೊಟ್ಟಿರುವ ಸಂಖ್ಯೆಯ ಎಲ್ಲ ಅಂಕಿಗಳನ್ನೂ ಕೂಡಿಸಿ. ಉದಾ : 12 ರ ಒಂದಂಕಿ = 1 + 2 = 3, 65ರ ಒಂದಂಕಿ = 6 + 5 = 11 ( ಎರಡು ಅಂಕಿಗಳು ಬಂದರೆ ಮತ್ತೆ ಕೂಡಿಸಿ ಒಂದಂಕಿ ಮಾಡಿ) = 1 + 1 = 2


ಈ ಒಂದಂಕಿ ಸಹಾಯದಿಂದ ಸುಲಭವಾಗಿ ತಾಳೆ ನೋಡಬಹುದು.


ಉದಾ : 123ರ ವರ್ಗ


ಎ) 15129 ಬಿ) 15139 ಸಿ) 25129 ಡಿ) 15229


ಮೇಲಿನ, ಉದಾಹರಣೆಯಲ್ಲಿ ಪ್ರಶ್ನೆಯಲ್ಲಿರುವ 123ನ್ನು ಒಂದಂಕಿಯಾಗಿ ಪರಿವರ್ತಿಸಿ,


1+2 + 3 = 6, 6ರ ವರ್ಗ( ಏಕೆಂದರೆ, ಇಲ್ಲಿ ನಾವು 123ರ ವರ್ಗವನ್ನು ಕಂಡುಹಿಡಿಯಬೇಕು) = 36 = 3+6 ರ ಒಂದಂಕಿ = 9


ಈಗ ಉತ್ತರದ ಆಯ್ಕೆಗಳಲ್ಲಿ, ಯಾವ ಆಯ್ಕೆಯು 9ನ್ನು ಒಂದಂಕಿಯಾಗಿ ಕೊಡುತ್ತದೆ ಎಂದು ನೋಡಿ.


ಆಯ್ಕೆ ಎ) ದ ಒಂದಂಕಿ 9 ಆಗುತ್ತದೆ, ಅಂದರೆ, 123 ರ ವರ್ಗ 15129 ಆಯ್ಕೆ ಎ) ಸರಿ ಉತ್ತರ !


ಈ ತಾಳೆ ನೋಡುವ ಪದ್ಧತಿಯಿಂದ ಸರಿಯಾದ ಆಯ್ಕೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಂಡುಹಿಡಿಯಬಹುದು!


ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಒಂದಂಕಿಗಳು ಒಂದೇ ಆಗಿದ್ದರೆ ಬೇರೆಯ ರೀತಿಯ ತಾಳೆ ನೋಡುವ ಪದ್ಧತಿಗಳನ್ನು ಬಳಸಬಹುದು. ಮೊದಲೇ ತಿಳಿಸಿದಂತೆ, ಈ ಕೆಲವು ವಿಧಾನಗಳು ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಮಾತ್ರ ಸಹಕಾರಿಯಾಗಿರುತ್ತವೆ.


(ಲೇಖಕರು ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)


Sunday, 17 November 2019

ಕಥೆಗಳ ಮೂಲಕ ವ್ಯಾಕರಣ... ಕಲಿಕೆ

ಕಥೆಕಥೆ ಕಾರಣ.. ಕಥೆ ಮೂಲಕ ವ್ಯಾಕರಣ!



ಮಂಜುಳಾ ರಾಜ್‌


ಕ ಥೆಗಳಿಗೆ ಮಕ್ಕಳಲ್ಲಿ ಒಂದು ರೀತಿಯ ಮಾಂತ್ರಿಕ ಜಗತ್ತನ್ನೇ ಸೃಷ್ಟಿಸಿ ಮಂತ್ರಮುಗ್ಧಗೊಳಿಸುವ ಜಾದೂಶಕ್ತಿಯಿದೆ. ಅವು ಬದುಕಿನ ಬಗ್ಗೆ ಹೇಳುತ್ತವೆ, ನಮ್ಮ ಬಗ್ಗೆ, ಇತರರ ಬಗ್ಗೆ ಕೂಡ ಕುತೂಹಲ ಸೃಷ್ಟಿಸುತ್ತವೆ. ಇದು ಮಕ್ಕಳಿಗೆ ಒಂದು ವಿಷಯವನ್ನು ಅರ್ಥ ಮಾಡಿಸಲು, ಸಂಸ್ಕೃತಿ, ಇತಿಹಾಸವನ್ನು ಪರಿಚಯಿಸಲು ತಕ್ಷಣಕ್ಕೆ ಸಿಗುವ ಸಾಧನ ಎನ್ನಬಹುದು.


ಈಗ ಆಧುನಿಕ ಗ್ಯಾಜೆಟ್‌ಗಳು ಬಂದು ಕಥೆ ಹೇಳುವ ಅಭ್ಯಾಸ ಅಥವಾ ಅಜ್ಜಿಯರು ಹೇಳುವ ಕಥೆ ಕೇಳಿಸಿಕೊಳ್ಳುವುದು ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಅದು ಮತ್ತೊಂದು ರೂಪದಲ್ಲಿ ಮತ್ತೂ ಆಕರ್ಷಕವಾಗಿ, ಉಪಯುಕ್ತವಾಗಿ ಹೊರ ಬರುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದು ಹೇಗೆಂದರೆ ಶಿಕ್ಷಣದಲ್ಲಿ ಈ ಕಥಾರೂಪವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಕ್ಲಿಷ್ಟಕರ ವಿಷಯವನ್ನು ಅತ್ಯಂತ ಸರಳೀಕರಿಸಿ ಹೇಳಲು ಇದು ಸುಲಭ ಮಾಧ್ಯಮ.

ಆರಂಭದಲ್ಲಿ ಪುಟ್ಟ ಮಕ್ಕಳನ್ನು ರಂಜಿಸಲು, ಅವರಲ್ಲಿ ಏಕಾಗ್ರತೆ ಮೂಡಿಸಲು, ಒಂದು ಕಡೆ ಕೂರುವಂತೆ ಮಾಡಲು, ಮನಸ್ಸಿನಲ್ಲಿ ಮೂಡುವ ಅರ್ಥವಾಗದ ಪ್ರಶ್ನೆಗಳಿಗೆ ಒಂದು ಮೂರ್ತ ರೂಪ ನೀಡಲು, ಧ್ವನಿ, ಶಬ್ದ, ಭಾಷೆಯನ್ನು ಪರಿಚಯಿಸಲು, ಪುಸ್ತಕ, ಕಥೆಗಳ ಬಗ್ಗೆ ಒಲವು ಬೆಳೆಸಲು ಬಳಕೆಯಾಗುವ ಈ ಮಾಧ್ಯಮವನ್ನು ನಿಧಾನವಾಗಿ ಶಿಕ್ಷಣದ ಮೂಲ ಪಾಠಗಳನ್ನು ಅರ್ಥ ಮಾಡಿಸಲು ಬಳಸಬಹುದು. ಅದು ಅವರಲ್ಲಿ ಕಲಿಕೆಯ ಕುರಿತು ಆತ್ಮವಿಶ್ವಾಸವನ್ನು ಕೂಡ ಹೆಚ್ಚು ಮಾಡಬಲ್ಲದು; ಸೃಜನಶೀಲ ಅಲೋಚನೆಗಳನ್ನು ಮೂಡಿಸಬಲ್ಲದು. ಎಲ್ಲಕ್ಕಿಂತ ಹೆಚ್ಚಾಗಿ ಆಲಿಸುವ ಕ್ರಿಯೆಯಲ್ಲಿ ಆಸಕ್ತಿ ಮೂಡಿಸುತ್ತದೆ.

ವ್ಯಾಕರಣ

ವ್ಯಾಕರಣ ಯಾವ ಭಾಷೆಯದೇ ಆಗಿರಲಿ, ಅದು ಕಬ್ಬಿಣದ ಕಡಲೆಯೇ, ಅದನ್ನು ಸುಲಭ ಮಾಡುವುದು ಹೇಗೆ? ಅಲ್ಲೂ ಸಹಾ ನಮ್ಮ ಕಥೆಗಳು ಸಹಾಯಕವಾಗುತ್ತವೆ. ಯಾವುದಾದರೂ ಒಂದು ಕಥೆ ಹೇಳಿದಾಗ ಮಕ್ಕಳು ಬಹಳ ಇಷ್ಟಪಟ್ಟು ಕುತೂಹಲದಿಂದ ಕೇಳುತ್ತಾರೆ. ಆ ಕಥೆಗಳ ಮೂಲಕ ವ್ಯಾಕರಣವನ್ನು ಕಲಿಸಬಹುದೆಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಅಲ್ಲವೇ?

ಕಲಿಯುವ ರೀತಿ ನೀರಸವಾಗದಿರಲು....

ಯಾವುದೇ ವಾಕ್ಯವನ್ನು ನೀವು ಅವರಿಗೆ ಕಲಿಸಬೇಕೆಂದಾಗ ಮಕ್ಕಳು ಬಾಯಿಪಾಠ ಮಾಡಿ ಕಲಿಯುತ್ತಾರೆ, ಆದರೆ ಕಲಿಯುವ ರೀತಿ ಮಾತ್ರ ನೀರಸವಾಗಿರುತ್ತದೆ. ಆದರೆ ಕಥೆಗಳನ್ನು ಮತ್ತೆ ಮತ್ತೆ ಕೇಳಲು ಅವರಿಗೆ ಯಾವುದೇ ಬೇಸರವಿರುವುದಿಲ್ಲ. ಆ ವಾಕ್ಯಗಳು ಅವರ ಮನದಲ್ಲಿ ಮೂಡಿ ಬಿಡುತ್ತವೆ. ಭಾಷೆ ಬೇರೆಯದೇ ಆದರೂ ಅವರಿಗೆ ವಾಕ್ಯಗಳು ಪರಿಚಿತವಾಗಿ ಬಿಡುತ್ತವೆ. ಕಥೆ ಹೇಳುವ ಮೂಲಕ ಗ್ರಹಣ ಶಕ್ತಿ, ಶಬ್ದ ಸಂಪತ್ತು, ಮಾತನಾಡುವ ಕಲೆ, ಸೃಜನಶೀಲತೆ ಮತ್ತು ವ್ಯಾಕರಣವನ್ನೂ ಕಲಿಸಬಹುದು.

ವಾಕ್ಯಗಳ ರಚನೆ

ಮೊದಲಿಗೆ ವಾಕ್ಯಗಳ ರಚನೆ. ವಾಕ್ಯಗಳನ್ನು ಬರೆಯುವಾಗ ಪದಗಳ ಮಧ್ಯೆ ಒಂದು ಬೆರಳಿನಷ್ಟು ಸ್ಥಳ ಬಿಡಬೇಕು, ವಾಕ್ಯದ ಪ್ರಾರಂಭ ದೊಡ್ಡ ಅಕ್ಷರದಿಂದಲೇ ಆಗಬೇಕು ಮತ್ತು ವಾಕ್ಯದ ಕೊನೆಗೆ ಪೂರ್ಣ ವಿರಾಮ, ಪ್ರಶ್ನಾರ್ಥಕ ಚಿಹ್ನೆ, ಆಶ್ಚರ್ಯ ಸೂಚಕ ಚಿಹ್ನೆ.. ಈ ರೀತಿ ಯಾವುದಾದರೂ ಚಿಹ್ನೆ ಬರಬೇಕೆಂದು ತಿಳಿಸಲಾಗುತ್ತದೆ. ಕಥೆಯ ವಾಕ್ಯಗಳಲ್ಲಿ ಬರುವ ದೊಡ್ಡ ಅಕ್ಷರಗಳ (ಕ್ಯಾಪಿಟಲ್ ಲೆಟರ್) ಕೆಳಗೆ ಗೆರೆಗಳನ್ನೂ ಮಕ್ಕಳಿಂದಲೇ ಹಾಕಿಸುವ ಮೂಲಕ ಮತ್ತೆ ಮತ್ತೆ ವಾಕ್ಯಗಳ ಮೊದಲು ದೊಡ್ಡ ಅಕ್ಷರ ಬರಬೇಕು ಮತ್ತು ವಾಕ್ಯದ ಕೊನೆಗೆ ಪೂರ್ಣ ವಿರಾಮ ಚಿಹ್ನೆ ಬರೆಯಬೇಕೆನ್ನುವ ವಿಷಯವನ್ನು ಒತ್ತಿ ಹೇಳಲಾಗುತ್ತದೆ. ಈ ವಿಷಯ ಮಕ್ಕಳ ಮನಸ್ಸಿನಲ್ಲಿ ಮುದ್ರಿತವಾಗಿ ಬಿಡುತ್ತದೆ.

ನಾಮಪದಗಳು

ಎರಡನೆಯದಾಗಿ ಪ್ರಾಣಿಗಳ ಕಥೆ, ಉದಾಹರಣೆಗೆ ತೋಳ- ಕುರಿಮರಿ ಕಥೆ ಹೇಳುವ ಮೂಲಕ ಕಥೆಯಲ್ಲಿ ಬರುವ ನಾಮಪದಗಳ ಪರಿಚಯವನ್ನು ಮಾಡಲಾಗುತ್ತದೆ. ಕಥೆಯಲ್ಲಿ ಬರುವ ನಾಮಪದಗಳ ಕೆಳಗೆ ಗೆರೆ ಹಾಕಿ ಗುರುತಿಸಲು ಹೇಳಲಾಗುತ್ತದೆ. ನಾಲ್ಕು ಕಾಲಂ ಮಾಡಿ ಜನರ ಹೆಸರು, ಸ್ಥಳಗಳು, ಪ್ರಾಣಿಗಳು ಮತ್ತು ವಸ್ತುಗಳನ್ನು ಬರೆಯಲು ಹೇಳಲಾಗುತ್ತದೆ. ಕಥೆಯನ್ನು ಮತ್ತೆ ಮತ್ತೆ ಕೇಳಿದ್ದರಿಂದ ಮಕ್ಕಳಿಗೆ ವಾಕ್ಯಗಳು ಪರಿಚಿತ ಮತ್ತು ನಾಮಪದಗಳ ಗುರುತಿಸುವಿಕೆ ಸುಲಭವಾಗುತ್ತದೆ.

ಇದೇ ರೀತಿಯಲ್ಲಿ ಪ್ರತಿಯೊಂದು ಕಥೆ ಹೇಳುವಾಗಲೂ ಒಂದೊಂದು ವ್ಯಾಕರಣ ವಿಷಯಗಳನ್ನು ತಿಳಿಸಿ ಕೊಡಲಾಗುತ್ತದೆ. ಕ್ರಿಯಾಪದ, ಸರ್ವನಾಮ, ವಚನಗಳು, ಕಾಲಗಳು... ಈ ರೀತಿ ಒಂದೊಂದನ್ನೇ ಮತ್ತೆ ಮತ್ತೆ ವಿವರವಾಗಿ ತಿಳಿಸಿದಾಗ ಕಥೆಯ ಜೊತೆ ವ್ಯಾಕರಣವೂ ಮನದಲ್ಲಿ ಮೂಡುತ್ತದೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಪಾಠ ಹೇಳಿಕೊಡುವ ಆಶಾ ಇನ್ಫಿನೈಟ್ ಸಂಸ್ಥೆಯ ನಿರ್ದೇಶಕಿ ಕಾಂತಿ ಮೇಡಾ ಅವರು ‘ಮಕ್ಕಳಿಗೆ ವ್ಯಾಕರಣ ಬಹಳ ಮುಖ್ಯ, ಆದರೆ ಅವರು ಅದನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಬೇಕೆಂದರೆ ಅವರಲ್ಲಿ ಆಸಕ್ತಿ ಮೂಡಿಸುವುದು ಬಹಳ ಮುಖ್ಯ. ಕಥೆಯ ಮೂಲಕ ಕಲಿಸುವುದು ನಿಜಕ್ಕೂ ಸುಲಭ, ಕಥೆಯ ಮೂಲಕ ಶಿಕ್ಷಣ ಬಹಳ ಪುರಾತನವಾದುದು ಮತ್ತು ಜನಪ್ರಿಯವೂ ಹೌದು. ಕಷ್ಟಕರವೆನಿಸಿಕೊಂಡ ವಿಷಯಗಳನ್ನು ಕಥೆಗಳ ಮೂಲಕ ತಿಳಿಸುವುದು ಸಾಧ್ಯವಿದೆ ಎನ್ನುವುದಕ್ಕೆ ಪಂಚತಂತ್ರ ಬಹಳ ಒಳ್ಳೆಯ ಉದಾಹರಣೆ’ ಎನ್ನುತ್ತಾರೆ .

‘ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೆಂದರೆ ಅವರಿಗೆ ಕಥೆಗಳನ್ನು ಹೇಳಿ. ಅವರು ಇನ್ನೂ ಹೆಚ್ಚು ಬುದ್ಧಿವಂತರಾಗಬೇಕೆಂದರೆ ಇನ್ನೂ ಹೆಚ್ಚು ಹೆಚ್ಚು ಕಥೆಗಳನ್ನು ಹೇಳಿ’ ಎಂದು ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಹೇಳಿಕೆಯನ್ನು ಇಲ್ಲಿ ಪ್ರಸ್ತಾಪಿಸಬಹುದು. v

ಕಥೆಯಿಂದ ಭಾಷೆಯ ತಳಪಾಯ


ಇಡೀ ವಿಶ್ವದ ಹಲವಾರು ಸಂಸ್ಕೃತಿಗಳು ಈಗಲೂ ಕಥೆ ಹೇಳುವ ಕಲೆಯನ್ನು ಶಿಕ್ಷಣದ ಮುಖ್ಯ ಸಾಧನವನ್ನಾಗಿ ಬಳಸುತ್ತಿವೆ. ಮಕ್ಕಳಿಗೆ ಕಥೆ ಎಂದರೆ ಅದೇನೋ ಮೋಹ, ಅವರು ಕಥೆಯನ್ನು ಕೇಳಿದಾಗ ಅವರಲ್ಲಿ ಭಾಷೆಯ ಗಟ್ಟಿಯಾದ ತಳಪಾಯವೇ ಅಲ್ಲಿ ಮೂಡಿ ಬಿಡುತ್ತದೆ. ಹೇಳುವ ವಿಷಯವನ್ನು ಸುಮ್ಮನೆ ಹೇಳಿದಾಗ ಮೂಡುವ ಪರಿಣಾಮವೇ ಬೇರೆ, ಆದರೆ ಕಥೆಯ ಮೂಲಕ ಆಗುವ ಪರಿಣಾಮವೇ ಬೇರೆ. ಕಥೆ ಅವರಲ್ಲಿ ಭಾವನಾ ತರಂಗಗಳನ್ನು ಎಬ್ಬಿಸುತ್ತದೆ.

Tuesday, 17 September 2019

ಜಾನಪದಗಳಲ್ಲಿ ವೈಚಾರಿಕತೆ ಹೇಳುವ ಹೊಸ ಮಾದರಿ


ನನ್ನ ಇತ್ತೀಚಿನ  ಕೃತಿ ನಮ್ಮೂರ ಜಾನಪದ ಅನುಸಂಧಾನ ಪುಸ್ತಕದ ಕುರಿತು ಜಾನಪದ ಸಂಶೋಧಕರಾದ ಡಾ. ಅರುಣ್ ಜೋಳದ ಕೂಡ್ಲಗಿ ಅವರು ಬರೆದ ಮುನ್ನುಡಿಯ ಮಾತುಗಳು

''ಮಕ್ಕಳಲ್ಲಿ ವೈಚಾರಿಕತೆ ಕಲಿಸುವ ಜಾನಪದದ ಹೊಸ ಮಾದರಿ''

ಮಸ್ಕಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವಿಚಂದ್ರ.(ರವಿರಾಜ್ ಸಾಗರ್) ಅವರು ನನ್ನನ್ನು ಸಂಪರ್ಕಿಸಿ ಶಾಲಾ ಪಠ್ಯದಲ್ಲಿ ಜಾನಪದ ಲಯವನ್ನು ಸೇರಿಸುವ ಪಠ್ಯಂತರ್ಗತ ಪ್ರಯತ್ನ ಮಾಡಿದ್ದೇನೆ  ಇದಕ್ಕೆ ಮುನ್ನುಡಿ ಬೇಕೆಂದು ಕೇಳಿದರು. ಅಪರಿಚಿತರಾಗಿದ್ದ ರವಿಚಂದ್ರ ಅವರ ಕೋರಿಕೆ ನನಗೆ
ಕುತೂಹಲ ಮೂಡಿಸಿತು. ಹಾಗಾಗಿ ಬರೆಯುವುದಾಗಿ ಹೇಳಿ ಕರಡು ಪ್ರತಿ
ತರಿಸಿಕೊಂಡು ಓದಿದೆ. ಈ ಪ್ರಯೋಗ ನಿಜಕ್ಕೂ ಖುಷಿಯಾಯಿತು.
ಈ ಕೃತಿಯ ಹೆಸರು ನಮ್ಮೂರ ಜಾನಪದ ಅನುಸಂಧಾನಇಲ್ಲಿ ಊರಿನ
ಜನಪದರ ಮೌಖಿಕ ಸಾಹಿತ್ಯವನ್ನು ಸಂಗ್ರಹಿಸಿದ ಶಾಲಾ ಮಕ್ಕಳು ಮತ್ತು ಶಿಕ್ಷಕರು,
ಇದೇ ಮೌಖಿಕ ಲಯ ಬಳಸಿ ಮಕ್ಕಳ ಕಲಿಕೆಗೆ ನೆರವಾಗುವಂತೆ ರವಿಚಂದ್ರ
ಅವರು ರಚಿಸಿದ ಪಠ್ಯಂತರ್ಗತ ಜಾನಪದ ಪದ್ಯಗಳಿವೆ. ಇಲ್ಲಿ ಈ ಮೂರೂ
ಸಂಗತಿಗಳ ಮುಖಾಮುಖಿಯಾಗಿದೆ. ವಿಶೇವೆಂದರೆ ಜಾನಪದದ ಸಂಗ್ರಹ
ಮತ್ತು ಅದರ ಆನ್ವಯಿಕತೆ ಎರಡೂ ಜೊತೆಜೊತೆಗೆ ನಡೆದಿದೆ. ಇದು ಈ
ಕೃತಿಯ ವಿಶಿಷ್ಟ ಸಂಗತಿ. ಜಾನಪದವನ್ನು ಸಂಗ್ರಹಿಸುವ ಯಾರೇ ಆಗಲಿ ಜಾನಪದ
ಕ್ಷೇತ್ರದ ಬಗೆಗೆ ಇರುವ ಕೆಲವು ಮೂಡನಂಬಿಕೆಗಳ ಬಗೆಗೆ ಅರಿಯಬೇಕು.
ಜಾನಪದವೆಂದರೆ ಗ್ರಾಮೀಣ, ಅನಕ್ಷರಸ್ಥರದ್ದು, ಸಾಮರಸ್ಯದ್ದು, ಮೌಖಿಕವಾದದ್ದು,
ಬೆಲೆಯುಳ್ಳದ್ದು, ನಾಶವಾಗುತ್ತದೆ ಉಳಿಸಬೇಕು ಮುಂತಾದ ನಂಬಿಕೆಗಳನ್ನು
ಜಾನಪದಕ್ಕೆ ಬಿಗಿಯಾಗಿ ಕಟ್ಟಲಾಗಿದೆ. ಇವೆಲ್ಲಾ ಜಾನಪದದ ತಿಳುವಳಿಕೆಯನ್ನು
ಕುಬ್ಜಗೊಳಿಸಿವೆ. ಜಾನಪದ ಸಾವನ್ನು ನಿರಾಕರಿಸುವಂಥದ್ದು. ಎಲ್ಲಾ ಕಾಲಕ್ಕೂ
ಹೊಸ ಆಕಾರಗಳಲ್ಲಿ ಎಲ್ಲಾ ಕಡೆಯೂ ಜೀವಿಸುವಂಥದ್ದು. ಜನರು ಎಲ್ಲಿಯವರೆಗೆ
ಉಸಿರಾಡಿಕೊಂಡು ಮಾತನಾಡಿಕೊಂಡು ಲೋಕವನ್ನು ತನ್ನದೇ ಅಚ್ಚರಿ, ಭಯ,
ಆತಂಕ, ಕೌತುಕಗಳೊಂದಿಗೆ ಕಥನ ಮಾಡುತ್ತಾರೋ ಅದೆಲ್ಲವೂ ಜಾನಪದದ
ರೂಪವೆ. ಬದಲಾಗುತ್ತದೆ. ಇಂತಹ ಬದಲಾದ ಸಂವಹನದಲ್ಲಿಯೂ ಹೊಸತೊಂದು
ಜಾನಪದ ಮೈದಾಳುತ್ತದೆ. ಉದಾಹರಣೆಗೆ ಅಂತರ್ಜಾಲದಲ್ಲಿ ಜನರು ಸಂಧಿಸುತ್ತಿದ್ದು
ಅಲ್ಲೊಂದು ಡಿಜಿಟಲ್ ಫೋಕ್‌ಲೋರ್ ಹುಟ್ಟುತ್ತಿದೆ. ಇರುವ ಜಾನಪದವನ್ನೆಲ್ಲಾ
ಮೋಹಿಸಬೇಕಿಲ್ಲ. ಜಾನಪದದಲ್ಲಿ ನಾಶಮಾಡಬೇಕಾದ್ದು, ಸಂಗ್ರಹಕ್ಕೆ ಯೋಗ್ಯವಲ್ಲದ್ದು
ಹೆಚ್ಚಿದೆ. ಜಾತಿ, ಲಿಂಗ, ಬಣ್ಣ, ಪ್ರದೇಶ, ಒಡೆಯ, ಆಳು ಇಂತಹ ಬೇಧಗಳ
ಗಟ್ಟಿಗೊಳಿಸಿ ಯಥಾಸ್ಥಿತಿಯನ್ನು ಉಳಿಸುವ ರಚನೆಗಳ ಸಂಖ್ಯೆ ದೊಡ್ಡದಿದೆ.
ಅಂತಹ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ರಚನೆಗಳನ್ನು ಮುಂದಿನ
ತಲೆಮಾರಿಗೆ ಕಾಪಿಡುವ ಅಗತ್ಯವಿಲ್ಲ. ಪ್ರತಿ ಜಾನಪದ ಸಂಗ್ರಾಹಕಾರು ಇದನ್ನು
ಗಮನಿಸಬೇಕಿದೆ.
ಕೃತಿಯಲ್ಲಿ ಶಿಕ್ಷಕರಾದ ರವಿಚಂದ್ರ ಅವರು ಜಾನಪದ ಲಯ ಬಳಸಿ ಬರೆದ
ಹಾಡುಗಳಲ್ಲಿ ಮತ್ತೊಂದು ಆಯಾಮವಿದೆ. ಇಲ್ಲಿ ಸಂವಿಧಾ£ಕ ಆಶಯಗಳನ್ನು
ಬಲಪಡಿಸುವ ಜಾಗೃತಿ ಮೂಡಿಸುವ ಸದಾಶಯವಿದೆ.
ಸೂವ್ವಿ ಸೂವಮ್ಮಾ ಶಾಲಿಗೆ ಹೋಗಮ್ಮಾ
ಸೂವ್ವಿ ಸೂವ್ವಿ ಸೂವಮ್ಮಾ ||
ಓಣ್ಯಾಗ ಅಡಬ್ಯಾಡ ಶಾಲೀಗೇ ಹೋಗಮ್ಮಾ.
ಶಾಲೀಗಾ ಹೋಗಿ ನೀನಾರು ಕಲಿಯಮ್ಮಾ |ಸುವ್ವಿ ಸುವ್ವಿ|
ಮಾಸ್ತಾರು ಬಡಿತಾರಂತ ಅಂಜಿಕೆ ಬ್ಯಾಡಮ್ಮಾ
ಮಾಸ್ತಾರು ಹೇಳಿದ್ದಾ ಕೇಳಿ ಶ್ಯಾಣ್ಯಾಕಿ ಆಗಮ್ಮಾ
ಕಲಿತ ನಾರಿ ಸುಖಿ ಕುಟುಂಬಕ ದಾರಿ |ಸುವ್ವಿ ಸುವ್ವಿ|
ನಿಮ್ಮಪ್ಪಗಾ ಹೆದರಾಬ್ಯಾಡ ಹೊಲಕಾ ನೀ ಬರಬ್ಯಾಡ
ಎಲ್ಲಾ ದಗುದಾವಾ ನಾನೇ ಮಾಡುವೆ
ನೀ ಬೇಸು ಓದಮ್ಮಾ |ಸುವ್ವಿ ಸುವ್ವಿ| (ಪುಟ: ೯)
ಈ ರಚನೆಯಲ್ಲಿ ಹೆಣ್ಣು ಶಾಲೆಗೆ ಹೋಗಿ ಕಲಿಯುವ ಆಶಯವಿದೆ.
ಜಾನಪದ ಸಾಹಿತ್ಯದ ತಾಯಿ ಗಂಡ ಬೈದರೂ ಎದುರಾಡದೆ ಬಾಳು ಎಂದರೆ
ಆಧು£ಕ ತಾಯಿ ನಿಮ್ಮಪ್ಪಗಾ ಹೆದರಬೇಡ ಹೊಲಕ ನೀ ಬರಬ್ಯಾಡ, ಸಾಲಿ ಓದಿ
ಆಫಿಸರ್ ಆಗಮ್ಮಾಎಂದು ಹಾರೈಸುತ್ತಾಳೆ. ಬಹುಶಃ ಜಾನಪದ ಲಯ ಬಳಸಿ
ಆಧುನಿಕ ವೈಚಾರಿಕತೆಯನ್ನು ಮೂಡಿಸುವ ಪ್ರಯತ್ನವೆಂದರೆ ಇದು. ರವಿಚಂದ್ರರ
ರಚನೆಯ ಮತ್ತೊಂದು ಹಾಡು ಜಾಗೃತಿ ಜನಪದಹೀಗಿದೆ:
ಕುಂತಂತ ಮೇಲ್ಜಾತಿ ನಿಂತಂತ ಕೆಳಜಾತಿ / ಅಣ್ಣಾ ಅಕ್ಕಂದಿರೆ ಕೇಳಿರಿ
ಮನು ಕುಲವೆಲ್ಲ ಒಂದೇ ಎನ್ನುವ / ನಿಸರ್ಗದಾ ಸತ್ಯ ತಿಳೀಯಿರಿ ||
ಯಾವ ಕುಲದವಾ ಮಾಡಿದನವ್ವಾ ಜಾತಿ ಪದ್ದತಿಯಾ ?
ನೂರಾರು ಜಾತಿಯ ಬೇದವ ಸೃಷ್ಟಿಸಿ/ ಏಸು ವರು ಒಡೆದಾಳುವಿರಿ||
ಯಾವ ಕುಲದವಾ ಮಾಡಿದನವ್ವಾ / ವರದಕ್ಷಿಣೆ ಪದ್ದತಿಯಾ ?
ಹೆಣ್ಣು ಹೆತ್ತೊರ ಕಣ್ಣಿರ ಕತೆಯಾ/ ಇನ್ನೂ ಏಸು ವರುಕೇಳುವಿರಿ||
ಯಾವ ಕುಲದವಾ ಮಾಡಿದನವ್ವಾ/ ನೂರೊಂದು ಶಾಸ್ತಗಳಾ ?
ಮೂಢನಂಬಿಕೆಗಳ ಬಲೆಯಲಿ ಬಿದ್ದು / ಇನ್ನೂ ಏಸು ವರು ಗೋಳಾಡುವಿರಿ||
(ಪುಟ:೧೮)
ಜಲಪದ ಹೀಗಿದೆ
ನೀರು ನೀರು ನೀರಮ್ಮ ನೀರು / ನೀರಿದ್ದರೆ ಮಾತ್ರ ಬೆಳಿಯೋದು ಊರು
ನೀರೇ ಬಂಗಾರ ಚೆಲ್ಲಾಬ್ಯಾಡಾ || ಸೂಯ್ ||
ಗಂಗಾ ದೇವಿಯ ಪ್ರಸಾದ, ತುಂಗಾಮಾತೆಯ ವರದಾನ
ನಮ್ಮ ಹೊಸಪೇಟೆ ಡ್ಯಾಮೇ ವರದಾನ/ ಮಿತವಾಗಿ ಬಳಸೇ ಮಾತಾಯಿ.
||ಸುಯ್|| (ಪುಟ:೧೫)
ಈ ಮೇಲಿನ ಪದಗಳಲ್ಲಿ ಜಾತಿಪದ್ಧತಿಯ ಲೋಪದ ಬಗ್ಗೆ ಮಕ್ಕಳಲ್ಲಿ
ಜಾಗೃತಿ ಮೂಡಿಸುವ ಆಯಾಮವಿದೆ. ಜಲಪದ ಹಾಡಿನಲ್ಲಿ ನೀರಿನ ಮಹತ್ವದ
ಬಗ್ಗೆ ಅರಿವು ಮೂಡಿಸುವ ಉದ್ದೆಶವಿದೆ.
ಬಹುಶಃ ರವಿಚಂದ್ರ ಅವರ ಎಲ್ಲಾ ರಚನೆಗಳಲ್ಲಿಯೂ ಈ ಆಯಾಮವಿರುವುದು
ಆಶಾದಾಯಕ ಬೆಳವಣಿಗೆ. ಜೀವಪ್ರಪಂಚ, ನಿಸರ್ಗ ಸೋಜಿಗ, ಶಾಲೆ ಹಬ್ಬ,
ನೀರಿಗೋಗೋನು ಬಾ, ಮಳೆಹಾಡು, ಬನ್ನಿ ಮಕ್ಕಳೆ ನಮ್ಮೂರ ಶಾಲೆಗೆ, ಮುಂತಾದ
ಹಾಡುಗಳಲ್ಲಿ ಸಮತೆಯ ನಿಸರ್ಗ ವಿವೇಕವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಮೈಲಾದ ಮಹಾದೇವ, ಕುವೆಂಪು,
ನಾ.ಡಿಸೋಜ, ರಾಜಕುಮಾರ್ ತರಹದವರ ಗುಣಲಕ್ಷಣಗಳನ್ನೆ ಒಗಟಾಗಿಸಿ
ಉತ್ತರವಾಗಿ ಇವರುಗಳ ಹೆಸರು ತಂದಿರುವುದು ಪ್ರಯೋಗಶೀಲವಾಗಿದೆ.
ಜಾನಪದ ಮೋಹದಿಂದ ಅದೇ ಮೌಲ್ಯಗಳನ್ನು ಪ್ರತಿಪಾದಿಸುವ ಲಯದ
ಜತೆ ಹಾಡಿನ ತಿರುಳನ್ನೂ ಪಡೆದಿದ್ದರೆ ಬಹುಶಃ ರವಿಚಂದ್ರರೂ ಜಾನಪದರಂತೆ
ಟೀಕೆಗೆ ಗುರಿಯಾಗಬೇಕಿತ್ತು. ಆದರೆ ಈ ಮಿತಿಯನ್ನು ಅರ್ಥಮಾಡಿಕೊಂಡು
ಹೊಸ ಬಗೆಯ ವೈಚಾರಿಕ ಗೀತೆಗಳನ್ನು ಜನಪದ ಶೈಲಿಯಲ್ಲಿ ರಚಿಸಿದ್ದಾರೆ.
ಇದುವೆ ಈ ಕೃತಿಯ ಮತ್ತೊಂದು ಗಮನಾರ್ಹ ಸಂಗತಿ.

ಕರ್ನಾಟಕದ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಕೆಲವರು
ವಿಶ್ವವಿದ್ಯಾಲಯಗಳ ಬಹುಪಾಲು ಅಧ್ಯಾಪಕರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.
ಈಗ ಬರೆಯುತ್ತಿರುವ ಅತ್ಯುತ್ತಮ ಕವಿಗಳು ಶಾಲಾ ಮಾಸ್ತರರು. ಉಳಿದಂತೆ
ಸರಕಾರಿ ಶಾಲೆ ಉಳಿಸುವ ಪ್ರಯೋಗದಲ್ಲಿಯೂ ಗಮನ ಸೆಳೆಯುತ್ತಿದ್ದಾರೆ.
ಇದೊಂದು ಆಶಾದಾಯಕ ಬೆಳವಣಿಗೆ.  ಇದೊಂದು ಜಾನಪದ
ಸಂಗ್ರಹಕ್ಕೆ ಬಳಸುವ ವಿಶಿಷ್ಟ  ದಾರಿ. ಆದರೆ ಜಾನಪದ ಮೌಲ್ಯಗಳನ್ನು
ಮುರಿದುಕಟ್ಟುವ ರವಿಚಂದ್ರ ಅವರಂತಹ ಗೀತೆಗಳ ರಚನೆಯನ್ನು ಎಲ್ಲಾ ಶಿಕ್ಷಕರು
ಮಾಡಬೇಕಿದೆ. ಇದನ್ನು ಉಪಪಠ್ಯವಾಗಿ ಮಕ್ಕಳಿಗೆ ಕಲಿಸಬೇಕಿದೆ. ಬಹುಶಃ ಈ
ಪುಸ್ತಕದ ಮೂಲಕ ರವಾನೆಯಾಗಬೇಕಿರುವ ಸಂದೇಶವೂ ಇದೇಯಾಗಿದೆ.
ಈ ಕೃತಿಯಲ್ಲಿ ಸಂಗ್ರಹವಾದ ಜಾನಪದ ಸಾಹಿತ್ಯದ ಸಂಗ್ರಾಹಕರಾದ ಶಾಲಾ
ಮಕ್ಕಳಿಗೂ, ಹಾಡಿದ, ಮಾಹಿತಿ ನೀಡಿದ ಜಾನಪದ ಕಲಾವಿದರಿಗೂ, ಇಂತಹ
ಪ್ರಯೋಗಕ್ಕೆ ಒಡ್ಡಿಕೊಂಡ ಮತ್ತು ಮುನ್ನುಡಿಯ ನೆಪದಲ್ಲಿ ಜಾನಪದದ ಗ್ರಹಿಕೆಯ
ಬಗೆಗೆ ವಿಮರ್ಶಾತ್ಮಕ ಪುಟ್ಟ ಟಿಪ್ಪಣಿ ಬರೆಯಲು ಅವಕಾಶ ಕಲ್ಪಿಸಿದ ರವಿಚಂದ್ರ
ಅವರಿಗೂ ಅಭಿನಂದನೆಗಳು.
- ಡಾ. ಅರುಣ್ ಜೋಳದಕೂಡ್ಲಿಗಿ
ಜಾನಪದ ಸಂಶೋಧಕರು, ಬಳ್ಳಾರಿ
ಪುಸ್ತಕಕ್ಕೆ ಸಂಪರ್ಕಿಸಿ : ಸೃಜನ ಪುಸ್ತಕಾಲಯ .8660489901
                   ನನ್ನ ವಾಟ್ಸ್ ಆಪ್ – 9980952630.
ಪುಟಗಳು 124 . ಮುಖ ಬೆಲೆ -130.  ಅಂಚೆ ವೆಚ್ಚ  ಸೇರಿಯೂ 100 ರೂಗೆ ಲಬ್ಯ .